ಕುಕನೂರಿನ ಮಹಾಮಾಯಾ (ದ್ಯಾಮಮ್ಮ) ದೇವಿಯ ಜಾತ್ರೆ ಸಂಭ್ರಮ : ಹರಿದು ಬಂದ ಭಕ್ತ ಸಾಗರ..!
ಕುಕನೂರು : ರಾಜ್ಯಾಂದಂತ್ಯ ನಾಡ ಹಬ್ಬದ ದಸರಾದ ಸಂಭ್ರಮ ಮನೆ ಮಾಡಿದ್ದು, ಮೈಸೂರಿನಲ್ಲಿ ಅತಿ ಹೆಚ್ಚು ಸಂಭ್ರಮ ಮನೆ ಮಾಡಿದ್ದರೆ, ಇತ್ತ ದಸರಾ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿಯೂ ಸಹಿತ ಮಹಾಮಾಯಾ (ದ್ಯಾಮಮ್ಮ) ದೇವಿಯ ಜಾತ್ರೆಯೂ ಸಂಭ್ರಮದಿಂದ ಕೂಡಿದೆ.
ಕುಕನೂರು ಪಟ್ಟಣವನ್ನು ನೂರಾರು ವರ್ಷಗಳ ಹಿಂದೆ ಕುಂತಳಪುರ ಎಂದು ಕರೆಯಲಾಗುತ್ತು. ಮಹಾಮಾಯೆ (ದ್ಯಾಮಮ್ಮ) ದೇವಿಯ ದೇವಸ್ಥಾನವು ಅತ್ಯಂತ ಪುರಾತನ ದೇವಸ್ಥಾನವಾಗಿದ್ದು, ಬದಾಮಿ ಚಾಲುಕ್ಯರ ಕಾಲದ ಒಂದನೇ ವಿಕ್ರಮಾದಿತ್ಯನ ಕಾಲದ ಶಾಸನದ ಪ್ರಕಾರ ಈ ದೇವಸ್ಥಾನವು ಸುಮಾರು ೭ ಶತಮಾನಗಳಷ್ಟು ಹಳೆಯ ದೇವಸ್ಥಾನವಾಗಿದೆ.
ಮಹಾಮಾಯಾ ದೇವಿಯ ಮಹಾರಥೋತ್ಸವು ಇಂದು ಸಂಜೆ ೫ ಗಂಟೆ ನೆರವೆರಲಿದ್ದು, ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರು ಭಕ್ತರು ಆಗಮಿಸುತ್ತಿದ್ದಾರೆ. ಅದರಲ್ಲೂ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ದಾವಣಗೇರಿ, ಸಾಗರ, ಬೆಳಗಾಂ, ಶಿವಮೊಗ್ಗ ಜಿಲ್ಲೆಗಳಿಂದ ಸಾಕಷ್ಟು ಭಕ್ತರು ಪಾದಯಾತ್ರೆಯ ಮೂಲಕ ಜಾತ್ರೆಗೆ ಆಗಮಿಸುತ್ತಿದ್ದಾರೆ. ಭಕ್ತರಿಗಾಗಿ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ದೇವಸ್ಥಾನದಿಂದ ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ.