LOCAL NEWS : ಎನ್ ಎಸ್ ಎಸ್ ನಲ್ಲಿ ಮಾಡುವ ಶ್ರಮದಾನ ನಿಮ್ಮಲ್ಲಿರುವ ಅಹಂಕಾರ ಕಿತ್ತೊಗೆಯುತ್ತೆ: ಡಾ. ನಾಗರಾಜ ಹೀರಾ

You are currently viewing LOCAL NEWS : ಎನ್ ಎಸ್ ಎಸ್ ನಲ್ಲಿ ಮಾಡುವ ಶ್ರಮದಾನ ನಿಮ್ಮಲ್ಲಿರುವ ಅಹಂಕಾರ ಕಿತ್ತೊಗೆಯುತ್ತೆ: ಡಾ. ನಾಗರಾಜ ಹೀರಾ

ಎನ್ ಎಸ್ ಎಸ್ ನಲ್ಲಿ ಮಾಡುವ ಶ್ರಮದಾನ ನಿಮ್ಮಲ್ಲಿರುವ ಅಹಂಕಾರ ಕಿತ್ತೊಗೆಯುತ್ತೆ: ಡಾ. ನಾಗರಾಜ ಹೀರಾ

ಕೊಪ್ಪಳ : ‘ಎನ್ಎಸ್ಎಸ್ ನಿಮಗೆ ಎಲ್ಲವನ್ನು ಕಳಿಸಿ ಕೊಡಲಿದೆ ಎಂಎಸ್ಎಸ್ ನಲ್ಲಿ ಮಾಡುವ ಶ್ರಮದಾನವು ನಿಮ್ಮಲ್ಲಿರುವ ಅಹಂಕಾರವನ್ನು ಸಂಪೂರ್ಣ ಕಿತ್ತೊಗೆಯಲಿದೆ, ಶ್ರಮಧಾನ ಮಾಡುವುದು ಜೀವನದಲ್ಲಿ ಬಹಳ ಒಳ್ಳೆಯದು ಎಂದು ಡಾ. ನಾಗರಾಜ್ ಹೀರಾ ಅಭಿಪ್ರಾಯ ಪಟ್ಟರು.

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳದ ವತಿಯಿಂದ ದತ್ತು ಗ್ರಾಮ ಬಹದ್ದೂರ್ ಬಂಡಿಯಲ್ಲಿ ಆಯೋಜನೆ ಮಾಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿಡಾ ಅವರು, ‘ಎನ್ಎಸ್ಎಸ್ ನಿಮಗೆ ಎಲ್ಲವನ್ನು ಕಳಿಸಿ ಕೊಡಲಿದೆ ಎಂಎಸ್ಎಸ್ ನಲ್ಲಿ ಮಾಡುವ ಶ್ರಮದಾನವು ನಿಮ್ಮಲ್ಲಿರುವ ಅಹಂಕಾರವನ್ನು ಸಂಪೂರ್ಣ ಕಿತ್ತೊಗೆಯಲಿದೆ. ಮಹಾತ್ಮ ಗಾಂಧೀಜಿಯವರ ಕನಸಾದ ಗ್ರಾಮಗಳ ಉದ್ದಾರದಿಂದ ದೇಶ ಉದ್ದಾರ ಹಾಗಾಗಿ ಮೊದಲು ಗ್ರಾಮಗಳನ್ನ ಉದ್ಧಾರ ಮಾಡಬೇಕು ಆ ಮೂಲಕ ದೇಶದ ಉದ್ಧಾರ ಸಾಧ್ಯವೆಂದರು. ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ ದೇಹ ಮತ್ತು ಹೃದಯ ಇದ್ದಂತೆ. ಗಾಂಧೀಜಿಯವರನ್ನು ವಿಶ್ವ ಅರಿತಿದೆ. ಆದರೆ ಭಾರತ ಅವರ ಬಗ್ಗೆ ತಿಳಿಯದೆ ಇರುವದು ದುರ್ದೈವ ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರಾಜಕುಮಾರ್ ಮಾತನಾಡುತ್ತಾ ಸಾಧಕರನ್ನು ಸೃಷ್ಟಿಸುವ ಒಂದು ಘಟಕ NSS agide. ಮನೆಯಲ್ಲಿ ಕೆಲಸ ಮಾಡದವರು ಈ NSS nalli ಎಲ್ಲವನ್ನೂ ನೀವು ಮಾಡುತ್ತೀರಿ. ನಿಮಗೆ ಈ ಅವಕಾಶ ಸಿಕ್ಕಿದ್ದು ನಿಮ್ಮ ಸುದೈವ ಎಂದರು. ಕುಮಾರಿ ರಿಜ್ವಾನ್ ಶಿಬಿರದ ವರದಿ ವಾಚನ ಮಾಡಿದರು. ಗಂಗಾ ತಂಡದವರು ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಯಶೋಧಾ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಶ್ರೀ ಪರಶುರಾಮ ವಂದಿಸಿದರು.

Leave a Reply

error: Content is protected !!