ಹಳೆ ದ್ವೇಷದ ವಿಚಾರವಾಗಿ ಮಾರಣಾಂತಿಕ ಹಲ್ಲೆ : ಗಾಯಳು ಜಿಲ್ಲಾ ಆಸ್ಪತ್ರೆಗೆ ದಾಖಲು..!!
ಕುಕನೂರು : ತಾಲೂಕಿನ ತಳಕಲ್ ಗ್ರಾಮದ ಹೊರವಲಯದಲ್ಲಿ ಸಹೋದರ ಸಂಬಂಧಿಗಳ ಮದ್ಯ ನಡೆದ ಜಗಳ ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನಿನ್ನೆ ಮಂಗಳವಾರದಂದು ಸಂಜೆ ಈ ಘಟನೆ ನಡೆದಿದ್ದು, ಕೋಮಲಾಪುರ ಗ್ರಾಮದ ಗವಿಸಿದ್ದಪ್ಪ(30) ಹಲ್ಲೆ ಗೊಳಗಾದ ವ್ಯಕ್ತಿ ಇಂದು ತಿಳಿದು ಬಂದಿದೆ. ಆರೋಪಿ ಮುತ್ತಣ್ಣ(21) ಶಾಂತಪ್ಪ ಪೂಜಾರಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಗವಿಸಿದ್ದಪ್ಪ ಎಂಬಾತನಿಗೆ ಮನಬಂದಂತೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಗಂಭಿರವಾಗಿ ಗಾಯಗೊಳಿಸಿದ್ದಾನೆ. ಮಾಹಿತಿ ಬಂದ ತತಕ್ಷಣ ಕುಕನೂರು ಠಾಣಾ ಪಿಎಸ್‌ಐ ಟಿ. ಗುರುರಾಜ್ ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ.
ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.