ಬೆಳೆಹಾನಿ ಪರಿಹಾರವನ್ನು ನೀಡುವಂತೆ ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ
ಶಿರಹಟ್ಟಿ : ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ರಾಜ್ಯದಾದ್ಯಂತ ಸುರಿಯುತ್ತಿರುವ ಅತಿವೃಷ್ಟಿ ಮಳೆಯಿಂದ ಹಾನಿಯಾದ ಬೆಳೆಗಳಿಂದ ಅನ್ನದಾತರು ಸಾಲದ ಹೊರೆಯಿಂದ ಪರದಾಡುತ್ತಿದ್ದು ತಕ್ಷಣವೇ ಸರಕಾರವು ಬೆಳೆಹಾನಿ ಫರಿಹಾರವನ್ನು ನೀಡಬೇಕು ಎಂದು ಮನವಿ ಮಾಡಲಾಯಿತು.
ಮೂಲಕ ಅನ್ನದಾತರ ನೆರವಿಗೆ ಬರಬೇಕೆಂದು ತಾಲೂಕ ದಂಡಾಧಿಕಾರಿಗಳು ಶಿರಹಟ್ಟಿ ಇವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಜ್ಜಪ್ಪ ಬಿಡವೆ. ಸುನೀಲ ಸರ್ಜಾಪೂರ, ಶಿವಾನಂದ ಸುಲ್ತಾನಪೂರ, ಸತೀಶ ನರಗುಂದ. ಹಾಜರಿದ್ದರು.