ತೆರೆದ ಮನೆ ಕಾರ್ಯಕ್ರಮ : ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆ ಕುರಿತು ಅರಿವುಮೂಡಿಸಿದ ಎಎಸ್‌ಐ ನಿಂಗಮ್ಮ
ಕುಕನೂರು : ಶಾಲೆಯ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಕುಕನೂರು ಪೊಲೀಸ್ ಠಾಣೆಯ ಎಎಸ್‌ಐ ನಿಂಗಮ್ಮ ಅವರು ಅರಿವು ಮೂಡಿಸಿದರು.
ಇಂದು ತಾಲೂಕಿನ ಕಕ್ಕಿಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ‘ತೆರೆದ ಮನೆ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಎಸ್‌ಐ (ASI) ನಿಂಗಮ್ಮ ಅವರು, “ಪೊಲೀಸರಿಂದ ಅಂತರಕಾಯ್ದುಕೊಳ್ಳದೇ ನಿಮಗೆ ಆಗಬೇಕಾದ ಕೇಲಸಗಳನ್ನು ಯಾವುದೇ ಭಯವಿಲ್ಲದೇ ದೈರ್ಯಯುತವಾಗಿ ಕೇಳಿ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಇದರ ಜೊತೆಗೆ ಮಕ್ಕಳ ಹಕ್ಕುಗಳು, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳನ್ನು ನೀವು ತಿಳಿದುಕೊಳ್ಳಬೇಕು” ಎಂದು ಮಕ್ಕಳಿಗೆ ಅರಿವು ಮೂಡಿಸಿದರು.
ಬಾಲ ಕಾರ್ಮಿಕ ಪದ್ದತಿ, ಬಾಲ್ಯವಿವಾಹ ಇಂತಹ ಅನಿಷ್ಟಪದ್ದತಿಗಳನ್ನು ಸಮಾಜದಿಂದ ದೂರ ವಿಡಬೇಕು, ಮಕ್ಕಳಿಗೆ ತೊಂದರೆ ಆದಲ್ಲಿ 1098ಮಕ್ಕಳ ಸಹಾಯವಾಣಿಗೆ ಕರೆಮಾಡಿ ತತಕ್ಷಣೆಕ್ಕೆ ನಿಮ್ಮ ಸಹಾಯಕ್ಕೆ ಧಾವಿಸುತ್ತಾರೆ. ಜೊತೆಗೆ ನಿಮಗೆ ಸೂಕ್ತ ರೀತಿಯಲ್ಲಿ ರಕ್ಷಣೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಯ ಪ್ರಭುಲಿಂಗ ಗುರಿಕಾರ, ಸಹ ಶಿಕ್ಷಕರಾದ ಶಂಭು, ಬಸಮ್ಮ, ವೀಣಾ, ಅಕ್ಕಮ್ಮದೇವಿ ಹಾಗೂ ರವಿಕುಮಾರ್ ಹಿರೇಮಠ , ಎಸ್‌ಡಿಎಂಸಿ ಸದಸ್ಯರಾದ ಯಮನೂರಪ್ಪ ಭಾನಾಪೂರ್, ಪ್ರಕಾಶ್ ಬಳಗೇರಿ ಇದ್ದರು.