ಒಳ ಮೀಸಲಾತಿ ವರ್ಗೀಕರಣ ತಿರಸ್ಕರಿಸಿ, ಕಾಂತರಾಜು ಆಯೋಗದ ಬಹಿರಂಗ ಪಡಿಸುವಂತೆ ಆಗ್ರಹಿಸಿ ದಿನೇಶ್ ಗುಂಡೂರಾವ್ ಗೆ ಮನವಿ
ಕುಕನೂರ : ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಅವೈಜ್ಞಾನಿಕ, ಅತಾರ್ಕಿಕ ಹಾಗು ಅಸಮರ್ಥನೀಯ ದತ್ತಾಂಶಗಳನ್ನು ಒಳಗೊಂಡಿದ್ದು ಅದನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಿ, ಕಾಂತರಾಜು ಆಯೋಗದ ವರದಿಯನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಮನವಿ ಸಲ್ಲಿಸಲಯಿತು.
ತಾಲೂಕಾ ಬಂಜಾರ ಸಮಾಜ ಹಾಗೂ ಭೋವಿ ಶ್ರೀ ಸಿದ್ದರಾಮೇಶ್ವರ ಕ್ಷೇಮಾಭಿೃದ್ಧಿ ಸಂಘ ಮತ್ತು ಕೊಪ್ಪಳ ಜಿಲ್ಲಾ ಕುಳುವ ಮಹಾಸಂಘದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಕುಕನೂರು ಪಟ್ಟಣ ಪ್ರವಾಸಿ ಮಂದಿರದಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಹನುಮಂತ ಕೊಳಿಹಾಳ, ಲೋಕೇಶ್ ಭಜಂತ್ರಿ, ಕುಮಾರ ಬಳಿಗೆರ, ಪ್ರಕಾಶ ಬಳಗೇರಿ, ಗಣೇಶ್ ಯರಕಲ್, ದುರಗಪ್ಪ ಕರಮುಡಿ, ವಿಜಯ ಚವ್ಹಾಣ, ಶಶಿಕುಮಾರ್, ವಿಶ್ವನಾಥ್ ಹಾಗು ಇತರರಿದ್ದರು.