LOCAL NEWS : ಮಳೆಯ ಅವಾಂತರಕ್ಕೆ ಈರುಳ್ಳಿ ಬೆಳೆದ ರೈತರು ಕಂಗಾಲು : ಕಣ್ಣಿರು ಹಾಕಿದ ರೈತ ಮಹಿಳೆ ..!!

You are currently viewing LOCAL NEWS : ಮಳೆಯ ಅವಾಂತರಕ್ಕೆ ಈರುಳ್ಳಿ ಬೆಳೆದ ರೈತರು ಕಂಗಾಲು : ಕಣ್ಣಿರು ಹಾಕಿದ ರೈತ ಮಹಿಳೆ ..!!

LOCAL NEWS : ಮಳೆಯ ಅವಾಂತರಕ್ಕೆ ಈರುಳ್ಳಿ ಬೆಳೆದ ರೈತರು ಕಂಗಾಲು : ಕಣ್ಣಿರು ಹಾಕಿದ ರೈತ ಮಹಿಳೆ ..!!

ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳ ಗ್ರಾಮದ ರೈತರು ಮಳೆಯ ಅವಾಂತಕ್ಕೆ ಕಣ್ಣೀರು ಹಾಕಿದ್ದಾರೆ. ಬಾಳಿಗೆ ಬಂಗಾರವಾಗಬೇಕಿದ್ದ ಈರುಳ್ಳಿ ಮಣ್ಣು ಪಾಲುಆಗಿದ್ದು, ನಿರಂತರ ಮಳೆಗ55ಯಿಂದ ಜಮೀನಿನಲ್ಲೇ ಈರುಳ್ಳಿ ಬೆಳೆ  ಕೊಳೆತಹೊಗಿದೆ.

ಸರಿ ಸುಮಾರು ಎಕರೆಗೆ 50 ರಿಂದ 60ಸಾವಿರ ರೂ. ಖರ್ಚು ಮಾಡಿ ಉಳ್ಳಾಗಡ್ಡಿ ಬೆಳೆದಿದ್ದ ರೈತರು ಉಳ್ಳಾಗಡ್ಡಿ ಬೆಳೆ ಹಾನಿ ಕಂಡು ರೈತರು ಕಂಗಾಲಾಗಿದ್ದಾರೆ.   ಶಿರೋಳ ಗ್ರಾಮದ ದೇವಮ್ಮ ಹಳ್ಳಿ. ಕರಿಯಲ್ಲನ ಗೌಡ್ರ ಗೌಡರ್.ಎಂಬ ರೈತರು 50 ಸಾವಿರ ರಿಂದ1 ಲಕ್ಷ ಕರ್ಚು ಮಾಡಿ 2 ಎಕರೆ ಉಳ್ಳಾಗಡ್ಡಿ ಬೆಳೆದಿದ್ದರು. ಉಳ್ಳಾಗಡ್ಡಿ ಬೆಳೆ ಹಾನಿಯಾಗಿದ್ದು ನೋಡಿ ರೈತ ಮಹಿಳೆಯರು ಗೋಳಾಡುತ್ತಿದ್ದಾರೆ.  ಸಾಲಾಸೂಲ ಮಾಡಿ ಬೆಳೆದ ಉಳ್ಳಾಗಡ್ಡಿ ಬೆಳೆ ಮಣ್ಣು ಪಾಲಾಗಿದೆ. ಹಾನಿಯಾದ ಉಳ್ಳಾಗಡ್ಡಿ ಬೆಳೆಗೆ ಸೂಕ್ತವಾದ ರೈತಗೆ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಲಾಯಿತು.

ಪರಿಹಾರ ನೀಡದೆ ಹೋದರೆ ಮುಂದಿನ ದಿನಮಾನದಲ್ಲಿ ಮುಂಡರಗಿ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಕಿಸಾನ ಜಾಗೃತಿ ವಿಕಾಸ ಸಂಘದ ಗದಗ ಜಿಲ್ಲಾಧ್ಯಕ್ಷ ಧ್ರುವ ಕುಮಾರ ಹೂಗಾರ್ ಮತ್ತು ಜಿಲ್ಲಾ ಯುವ ಘಟಕದ ಅಧ್ಯಕ್ಷರು ಶಿವರಾಜ ಅಸುಂಡಿ ಇವರ ಎಚ್ಚರಿಕೆ ನೀಡಿದರು.

ವರದಿ:ವಿರೇಶ ಗುಗ್ಗರಿ

Leave a Reply

error: Content is protected !!