LOCAL NEWS : ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ ಎಂದು ಸಚಿವ ದಿನೇಶ್ ಗುಂಡೂರಾವ್ ಗೆ AIBSS ಮುಖಂಡರು ಮನವಿ..!
ಕುಕನೂರ : ನ್ಯಾ.ಎ ಜೆ ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು, ಅದು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದೆ ಎಂದು ತಿಳಿದು ಬಂದಿದೆ ಎಂದು ಮುಖಂಡ ಯಮನೂರ ಕಟ್ಟಿಮನಿ ಅವರು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಾನವರಿಕೆ ಮಾಡಿಕೊಟ್ಟರು.
ಸೋಮವಾರ (ಅಕ್ಟೊಬರ್ 23)ದಂದು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಅವೈಜ್ಞಾನಿಕ, ಅತಾರ್ಕಿಕ ಹಾಗು ಅಸಮರ್ಥನೀಯ ದತ್ತಾಂಶಗಳನ್ನು ಒಳಗೊಂಡಿದ್ದು ಅದನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಿ, ಕಾಂತರಾಜು ಆಯೋಗದ ವರದಿಯನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ (ರಿ.) ಕುಕನೂರು ತಾಲೂಕಾಘಟಕದಿಂದ ಮನವಿ ಸಲ್ಲಿಸಲಾಯಿತು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘ (ರಿ.) ಕುಕನೂರು ತಾಲೂಕಾಘಟಕದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ (ರಿ.) ಕುಕನೂರು ತಾಲೂಕಾ ಘಟಕದ ಅಧ್ಯಕ್ಷ ಮೇಘರಾಜ್ ಬಳಗೇರಿ, ಸದಸ್ಯರು ಹಾಗೂ ಬಳಗೇರಿ ಗ್ರಾ. ಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ, ಶ್ರೀಕಾಂತ್ ಕಟ್ಟಿಮನಿ, ಸೋಮಪ್ಪ ಕಾರಭಾರಿ, ತಿರುಪತಿ ತಲ್ಲೂರ್, ಕಿರಣ್ ಕುಮಾರ್ ರಾಠೋಡ್, ತಿರುಪತಿ ರಾಠೋಡ್ ಹಾಗು ಇತರರಿದ್ದರು.