ಸ್ಥಗಿತಗೊಂಡ ಮತದಾನ ಪ್ರಕ್ರಿಯೆ!
ಕುಕನೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಂತ ಇಂದು 28ರಂದು ಚುನಾವಣೆ ನಡೆಯುತ್ತಿದ್ದು ಈ ಚುನಾವಣೆ ಮುಕ್ತಾಯಕ ಇನ್ನು ಕೆಲವೇ ಕ್ಷಣಗಳು ಬಾಕಿ ಇದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ತರಕಾರಿ ನೌಕರರ ಚುನಾವಣೆಯು ಭಾರಿ ಸದ್ದು ಮಾಡಿತ್ತು, ಇದೀಗ ಈ ಈ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ಸ್ಥಗಿತಗೊಳಿಸಿದ್ದಾರೆ.
ಮಾನ್ಯ ನ್ಯಾಯಾಲಯದ ತಡೆ ಆಜ್ಞೆಯ ಕುರಿತು ತಾಲೂಕ ಚುನಾವಣೆ ಅಧಿಕಾರಿಯ ಗಮನಕ್ಕೆ ತಂದು 2:30 ನಿಮಿಷಕ್ಕೆ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಚುನಾವಣಾ ಅಧಿಕಾರಿ ನಿರ್ಧಾರ ಮಾಡಿದ್ದಾರೆ.
ಇಂದು ಬೆಳಗ್ಗೆ 9:00ಗೆ ಆರಂಭವಾದ ಮತದಾನ ಪ್ರಕ್ರಿಯೆಯು ಮಧ್ಯಾಹ್ನ 2:30ರ ವರೆಗೆ ನಡೆದಿದ್ದು, ಇಲ್ಲಿಯವರೆಗೆ ಪ್ರಾಥಮಿಕ ಪ್ರೌಢ ಹಾಗೂ ವಿವಿಧ ಇಲಾಖೆಯ ನೌಕರರ ಮತದಾನವು ನಡೆದಿದ್ದು, ಒಟ್ಟು 409 ಮತದಾನದಲ್ಲಿ 322 ಮತದಾನ ನಡೆದಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆಯ ಒಟ್ಟು 77 ಮತಗಳಲ್ಲಿ 63 ಮತಗಳು ಚಲಾವಣೆಯಾಗಿದೆ ಇಲ್ಲಿಗೆ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ.
” ಬೆಳಗ್ಗೆ 9 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ನನಗೆ ಮಾನ್ಯ ನ್ಯಾಯಾಲಯದ ತಡೆಯಾಜ್ಞೆ ಮಾಹಿತಿ ಇರಲಿಲ್ಲ, ಹಾಗಾಗಿ ಸಹಜವಾಗಿ ಮತದಾನ ಪ್ರಕ್ರಿಯೆ ಆರಂಭವಾಗಿತ್ತು, ಬಳಿಕ ಅರ್ಜಿದಾರರು ನನ್ನ ಬಳಿ ಬಂದು ಸುಮಾರು 9:55 ನಿಮಿಷಕ್ಕೆ ಮಾನ್ಯ ನ್ಯಾಯಾಲಯದ ತಡೆ ಆಜ್ಞೆಯ ಪ್ರತಿಯನ್ನು ನೀಡಿದ್ದಾರೆ. ಬಳಿಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾನೂನು ಸಲಗಾರ ಜೊತೆಗೆ ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ”
ಬಸಪ್ಪ ತಿಮ್ಮಾಪುರ್ ನಿವೃತ್ತ ಶಿಕ್ಷಕರು,
ಕುಕನೂರು ತಾಲೂಕ ಚುನಾವಣಾ ಅಧಿಕಾರಿಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಕನೂರು ಘಟಕ.