LOCAL NEWS : ಆತುರಾತುರವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡದಿರಿ, ಮುಂದೆ ನಿಮಗೆ ಗಂಭೀರವಾದಿತು : ಸುರೇಶ್ ಬಳೂಟಗಿ 

You are currently viewing LOCAL NEWS : ಆತುರಾತುರವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡದಿರಿ, ಮುಂದೆ ನಿಮಗೆ ಗಂಭೀರವಾದಿತು : ಸುರೇಶ್ ಬಳೂಟಗಿ 

ಪ್ರಜಾವೀಕ್ಷಣೆ ಸುದ್ದಿ ಜಾಲ :-

LOCAL NEWS : ಆತುರಾತುರವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡದಿರಿ, ಮುಂದೆ ನಿಮಗೆ ಗಂಭೀರವಾದಿತು : ಸುರೇಶ್ ಬಳೂಟಗಿ 

ಕುಕನೂರು : “ಯಾವುದೇ ಕಾರಣಕ್ಕೂ ಆತುರಾತುರವಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಆಗಬಾರದು” ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯ ಕಾಂಗ್ರೆಸ್ ಸರ್ಕಾರ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಒಪ್ಪಿಗೆ ನೀಡಿದ್ದು, ಖಂಡನಿಯ. 2005 ರಲ್ಲಿ ಧರ್ಮಸಿಂಗ್ ಸರಕಾರ ಇದ್ದಾಗ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆ ಮಾಡಿ ವರದಿ ಸಲ್ಲಿಸಲು ಹೇಳಲಾಗಿತ್ತು. 2012 ರಲ್ಲಿ ಸದಾನಂದಗೌಡ ಸರಕಾರ ಇದ್ದಾಗ ಅವೈಜ್ಞಾನಿಕ, ಅಸಮರ್ಪಕ, ಅಪೂರ್ಣ ವರದಿಯನ್ನು ನೀಡಿದರು.

ಈ ವರದಿಯನ್ನು ಯಾವ ಸರಕಾರವು ಒಪ್ಪಿಲ್ಲ. ಈಗ ಇವರು ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇವರು ಯಾವ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡುತ್ತಾರೆ.ಎಂಪಿರಿಕಲ್ ಡಾಟಾ (ಪ್ರಾಯೋಗಿಕ ದತ್ತಾoಶ) ಆಧರಿಸಿ ಒಳ ಮೀಸಲಾತಿ ನೀಡಬೇಕೆಂದು ಆದೇಶ ಮಾಡಿದೆ ಇದು ನಮ್ಮ ಸಮುದಾಯಗಳಿಗೆ ಆತಂಕ ಸೃಷ್ಟಿ ಮಾಡಿದೆ ಎಂದರು.

‘ಇವರ ಹತ್ತಿರ ಯಾವ ವರದಿ ಇದೆ, ಸದಾಶಿವ ಆಯೋಗದ ವರದಿ ಆಧಾರದ ಮೇಲೆ ಮಾಡಲು ಆ ವರದಿಯನ್ನು 2022 ರಲ್ಲಿ ಬಿಜೆಪಿ ಸರಕಾರ ಈ ವರದಿಯನ್ನು ಸಂಪೂರ್ಣವಾಗಿ ರದ್ದು ಮಾಡಿದೆ. ಇನ್ನೂ ಜಾತಿ ಗಣತಿ ಮೇಲೆ ಮಾಡಲು ಈಗಿನ ದತ್ತಾoಶ ಇವರ ಹತ್ತಿರ ಇಲ್ಲ, 2011 ರಲ್ಲಿ ಜಾತಿ ಗಣತಿ ಮಾಡಿದ್ದು, ಅದು ಹಳೆಯದಿದೆ.

ಪ್ರತಿ ಹತ್ತು ವರ್ಷಗಳಿಗೊಮ್ಮೆ ಜಾತಿ ಗಣತಿ ಮಾಡಬೇಕು. ಇವರ ಮುಖಕ್ಕೆ ಅದೂ ಇಲ್ಲ. ಮೊನ್ನೆ ದನಗಳ ಗಣತಿಗೆ ಚಾಲನೆ ನೀಡಿದ್ದಾರೆ, ನಾವು ಇವರ ಲೆಕ್ಕದಲ್ಲಿ ದನಗಳಿಗಿಂತ ಕೀಳಾಗಿದ್ದೇವೆ.ಇವರ ಹೇಳಿಕೆ ಪ್ರಕಾರ ಇನ್ನೂ ಮೂರು ತಿಂಗಳಲ್ಲಿ ವರದಿ ತರಿಸಿ ಅದರ ಆಧಾರದ ಮೇಲೆ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇಡೀ ರಾಜ್ಯದ ಪರಿಶಿಷ್ಟ ಜಾತಿಯ ಜನರ ವಸ್ತು ಸ್ಥಿತಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಲು ಹೇಗೆ ಸಾಧ್ಯ. ನಮ್ಮ ಸಮಾಜದ ಜನ ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದು, ತಾಂಡಾಗಳಲ್ಲಿ ಅವರಿಲ್ಲದ ಸಮಯದಲ್ಲಿ ಸಮರ್ಪಕ ವರದಿ ಸಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಇದನ್ನು ಇಲ್ಲಿಗೆ ನಿಲ್ಲಿಸುವದು ಒಳ್ಳೆಯದು.

ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ದಲಿತರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಜನರು ಅವರಿಗೆ ಅಧಿಕಾರ ಕೊಟ್ಟಿದ್ದು ಅಭಿವೃದ್ಧಿ ಕೆಲಸ ಮಾಡಲು, ಅದನ್ನು ಬಿಟ್ಟು ನಮ್ಮ ನೆಮ್ಮದಿ ಕೆಡಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಗೋರ ಸೇನಾ ಮುಖಂಡರಾದ ಕುಮಾರ ಬಳಗೇರಿ, ವಿಶ್ವನಾಥ ಕುಣಿಕೇರಿ, ಪ್ರಕಾಶ ಬಳಗೇರಿ, ಶರಣಪ್ಪ ಸುಳಿಕೇರಿ, ಶಶಿಕುಮಾರ ಕಾರಭಾರಿ, ವಿಜಯ ಚವ್ಹಾಣ ಉಪಸ್ಥಿತರಿದ್ದರು.

Leave a Reply

error: Content is protected !!