LOCAL BREAKING : ವಕ್ಫ್ ಮಂಡಳಿ ಆಸ್ತಿ ವಿವಾದ : ರೈತರಿಗೆ ಸಹಾಯವಾಣಿ ತೆರೆದ ಕೊಪ್ಪಳ ಜಿಲ್ಲಾ ಬಿಜೆಪಿ ಘಟಕ..!!

You are currently viewing LOCAL BREAKING : ವಕ್ಫ್ ಮಂಡಳಿ ಆಸ್ತಿ ವಿವಾದ : ರೈತರಿಗೆ ಸಹಾಯವಾಣಿ ತೆರೆದ ಕೊಪ್ಪಳ ಜಿಲ್ಲಾ ಬಿಜೆಪಿ ಘಟಕ..!!

ಪ್ರಜಾ ವೀಕ್ಷಣೆ ಸುದ್ದಿಜಾಲ :-

LOCAL BREAKING : ವಕ್ಫ್ ಮಂಡಳಿ ಆಸ್ತಿ ವಿವಾದ : ರೈತರಿಗೆ ಸಹಾಯವಾಣಿ ತೆರೆದ ಕೊಪ್ಪಳ ಜಿಲ್ಲಾ ಬಿಜೆಪಿ ಘಟಕ..!!

ಕೊಪ್ಪಳ : ರಾಜ್ಯದ್ಯಂತ ಬಾರಿ ಸದ್ದು ಮಾಡುತ್ತಿರುವ ವಕ್ಫ್ ಮಂಡಳಿ ಆಸ್ತಿ ವಿಚಾರವು ರಾಜ್ಯದ ವಿಜಯಪುರ, ಧಾರವಾಡ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ಇದೀಗ ಕೊಪ್ಪಳ ಜಿಲ್ಲೆಗೂ ಆವರಿಸಿಕೊಂಡಿದೆ.

ಈ ಕುರಿತು ಇಂದು ಕೊಪ್ಪಳ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಮಹತ್ವದ ಪತ್ರಿಕಾಗೋಷ್ಠಿ ಮಾಡಲಾಗಿದ್ದು, ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಮಂಡಳಿ ಎಂದು ನಮೋದಿಸಲಾಗಿದೆ. ಎಂಬ ರೀತಿ ಕಂಡುಬಂದಲ್ಲಿ ಜಿಲ್ಲೆಯ ರೈತರು ಯಾರ ಭಯವಿಲ್ಲದೆ 9164324861 ಈ ಸಹಾಯವಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹಾಗೂ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.

9164324861 ಕರೆ ಮಾಡಿ ನಿಮ್ಮ ಪಹಣಿ ಪತ್ರ ಹಾಗೂ ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನಮಗೆ ಕಳಿಸಿಕೊಡಿ ನಮ್ಮ ಕಡೆಯಿಂದ ಎಲ್ಲಾ ರೀತಿಯ ಕಾನೂನು ಸಲಹೆ ಮತ್ತು ಸಹಕಾರವನ್ನು ನೀಡಿ ಜಿಲ್ಲೆಯ ರೈತರಿಗೆ ನೆರವಾಗಲಿದ್ದೇವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ವಿಧಾನ ಪರಿ‍ಷತ್‌ ಸದಸ್ಯೆ ಹೇಮಲತಾ ನಾಯಕ, ಶರಣು ತಳ್ಳಿಕೇರಿ, ಬಸವರಾಜ್ ಕ್ವಾವಟರ್ ಹಾಗೂ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಇದ್ದರು.

Leave a Reply

error: Content is protected !!