BIG BEAKING : ವಕ್ಫ್‌ ಬೋರ್ಡ್‌ ಆಸ್ತಿ ವಿವಾದಕ್ಕೆ ಮತ್ತೊಂದು ರೋಚಕ ತಿರುವು : ಬೊಮ್ಮಾಯಿ ಸರ್ಕಾರ ಮಾಡಿದ ಯಡವಟ್ಟು..?!!

You are currently viewing BIG BEAKING : ವಕ್ಫ್‌ ಬೋರ್ಡ್‌ ಆಸ್ತಿ ವಿವಾದಕ್ಕೆ ಮತ್ತೊಂದು ರೋಚಕ ತಿರುವು : ಬೊಮ್ಮಾಯಿ ಸರ್ಕಾರ ಮಾಡಿದ ಯಡವಟ್ಟು..?!!

ಪ್ರಜಾ ವೀಕ್ಷಣೆಯ ರಾಜಕೀಯ ವಿಶೇಷ :-

BIG BEAKING : ವಕ್ಫ್‌ ಬೋರ್ಡ್‌ ಆಸ್ತಿ ವಿವಾದಕ್ಕೆ ಮತ್ತೊಂದು ರೋಚಕ ತಿರುವು : ಬೊಮ್ಮಾಯಿ ಸರ್ಕಾರ ಮಾಡಿದ ಯಡವಟ್ಟು..?!!

ಬೆಂಗಳೂರು : ರಾಜ್ಯದಲ್ಲಿ ಭಾರೀ ವಿವಾದವಾಗುತ್ತಿರುವ ವಕ್ಫ್‌ ಬೋರ್ಡ್‌ ಆಸ್ತಿ ವಿಚಾರವು, ಇದೀಗ ವಿವಾದವು ಮತ್ತೊಂದು ತಿರುವು ಪಡೆದಿದ್ದು, ರಾಜಕೀಯ ಕೆಸರೆರಚಾಟಕ್ಕೆ ನಾಂದಿಹಾಡಿದೆ. ಸಂಪೂರ್ಣವಾಗಿ ಕಾಂಗ್ರೆಸ್‌ ಸರ್ಕಾರದ ಕೈವಾಡವಿದೆ ಎಂದು ಬಿಜೆಪಿಗರು ಆರೋಪಿಸಿದ್ದರು.  ಈಗ ವಕ್ಫ್‌ ಬೋರ್ಡ್‌ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ  ಬಹುದೋಡ್ಡ ರೋಚಕ ತಿರುವು ಪಡೆದುಕೊಂಡಿದೆ.

ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿಯೆಂದು ನಮೂದಾಗಿರುವುದನ್ನು ನೋಡಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ವಕ್ಫ್ ಮಂಡಳಿ ಸಭೆಯಲ್ಲಿ ಕೂಡಲೇ ರೈತರಿಗೆ ನೀಡಿರುವ ನೋಟಿಸ್ ಪಡೆಯಿರಿ ಎಂದು ಕಡಕ್ಕಾಗಿ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಅಜೇಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ‘ವಕ್ಫ್ ವಿಚಾರವಾಗಿ ಬಿಜೆಪಿ ಸರ್ಕಾರ ಅವಧಿಯಲ್ಲೇ ನೋಟಿಸ್ ನೀಡಲಾಗಿದೆ’ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಇದಕ್ಕೆ ಪುಷ್ಟಿನೀಡುವಂತ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ವೀಡಿಯೋ ತುಣಕೊಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.

ಈ ವಿಡಿಯೋದಲ್ಲಿ ಬೋಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಹೇಳಿದ ಮಾತುಗಳ ಪ್ರಕಾರ, “2 ಸಾವಿರ ಕೋಟಿ ವಕ್ಫ್‌ ಬೋರ್ಡ್‌ ಆಸ್ತಿವು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿ ಆಗ್ಬೀಟ್ಟಿದೆ. ಬಹಳ ದೊಡ್ಡ ಅನ್ಯಾಯವಾಗಿದೆ. ಎಲ್ಲಿವರೆಗೂ ವಕ್ಫ್‌ ಬೋರ್ಡ್‌ ಆಸ್ತಿ ಒಂದೊಂದು ಇಂಚ ಇಂಚು ಆಸ್ತಿ ಕೊಡುವುದಿಲ್ಲವೋ ಅಲ್ಲಿವರೆಗೂ ನಾವು ನೀವು ಸುಮ್ಮನೆ ಕುಳಿತುಕೊಳ್ಳಬಾರದು. ವಕ್ಫ್‌ ಬೋರ್ಡ್ ಇದೆ. ಅದಕ್ಕೆಆದ ಕಾನೂನಿದೆ, ನೂರಾರು ವರ್ಷಗಳಿಂದ ಪಾಲನೆ ಆಗುತ್ತಿರುವ ನಿಯಮಗಳಿವೆ, ರಾಜ್ಯ ಗೇಜೆಟ್‌ ನೋಟಿಫಿಕೇಶನ್ ಆಗಿದೆ. ಸರ್ಕಾರ ಸಹಮತವಿದೆ. ಇಷ್ಟೆಲ್ಲಾ ಇದ್ದರೂ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ವಕ್ಫ್‌ ಆಸ್ತಿ ಹೇಗೆ ನಮೂದನೆ ಆಗುತ್ತಿದೆ?”ಎಂದು ಪ್ರಶ್ನೆ ಮಾಡಿದ್ದಾರೆ.

Leave a Reply

error: Content is protected !!