LOCAL NEWS : ತಾಲೂಕಾ ದಂಡಾಧಿಕಾರಿ ಕಚೇರಿ ಮುಂದೆ ಹರ ಸಾಹಸದಿಂದ ಮನವಿ ಸಲ್ಲಿಕೆ..!!
ಶಿರಹಟ್ಟಿ : ವಕ್ಪ ಮಂಡಳಿ ಹಾಗೂ ಲ್ಯಾಂಡ್ ಜಿಹಾದ್ ಮಂಡಳಿಯ ಅಕ್ರಮ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗುವುದರ ಮೂಲಕ ಬಂದು ತಹಸೀಲ್ದಾರ್ ಮೂಲಕ ಶಾಸಕರ ನೇತೃತ್ವದಲ್ಲಿ ಮನವಿ ಸಲ್ಲಿಸಲು ಬಂದಿದ್ದರು.
ಬಳಿಕ ಆ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಅವರನ್ನು ದಂಡಾಧಿಕಾರಿಗಳ ಕಚೇರಿಯ ಒಳಗೆ ಬಾರದಂತೆ ಗೇಟ್ ಮುಚ್ಚಿ ತಡೆದರು.
ಶಿರಹಟ್ಟಿ ವೃತ ಪೊಲೀಸ್ ಠಾಣೆಯ ಸಿಪಿಐ ನಾಗರಾಜ್ ಮಾಡಳ್ಳಿ ಅವರು ಶಾಂತಿಯುತವಾಗಿ ಬಂದು ಮನವಿ ನೀಡಲು ಬಂದವರನ್ನು ಒಳಗೆ ಬಿಡದೆ ಹೈಡ್ರಾಮ ಸೃಷ್ಟಿಸಿದರು.
ಈ ವೇಳೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗೇಟ್ ತಳ್ಳಿಕೊಂಡು ಒಳಗಡೆ ಹೋಗಲು ಮುಂದಾಗಿದ್ದರು. ಅದರಲ್ಲಿ ಕೆಲವು ಕಾರ್ಯಕರ್ತರು ಗೇಟ್ ಹಚ್ಚಿ ಒಳಗಡೆ ಹೋಗಲು ಮುಂದಾದರು.
ಈ ಸಮಯದಲ್ಲಿ ಕಾರ್ಯಕರ್ತರು ಅಧಿಕಾರಿಗಳಿಗೆ ದಿಕ್ಕಾರ ಕೂಗುತ್ತಾ ಆಕ್ರೋಶದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.