ಕಳ್ಳತನ ವಾಗಿದ್ದ ಆಟೋವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಲಕ್ಷ್ಮೇಶ್ವರ ಪೊಲೀಸರು
ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ದೂದ್ ನಾನಾ ದರ್ಗಾ ಆಟೋ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ ಮಲ್ಲಪ್ಪ ನಿಂಗಪ್ಪ ಅಂಕಲಿ ಎಂಬುವರ ವಾಹನ ಸಂಖ್ಯೆ ಕೆ ಎ – 26 -5991 ನಂಬರೇನ ಆಟೋ ದಿನಾಂಕ 13.09.2024 ರಂದು ರಾತ್ರಿ 11:00 ಗಂಟೆಯಿಂದ ಬೆಳಗಿನ ಐದು 15 ಒಳಗಿನ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣ ಆರೋಪಿ ಪತ್ತೆಗಾಗಿ ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ಈರಪ್ಪ ರೀತಿ, ಕ್ರೈಂ ಪಿಎಸ್ಐ ರಾಥೋಡ್ ಎ ಎಸ್ಐ ಮೌಲ್ವಿ, ಇನ್ನೂ ಹಲವರು ಸೇರಿದಂತೆ ತಂಡವನ್ನು ರಚನೆ ಮಾಡಲಾಗಿತ್ತು ಪ್ರಕರಣವನ್ನು ಭೇದಿಸಿದ ಸದಾಮಿ ಮಾಮ್ ಹುಸೇನ ಗದಗ್ ಹುಬ್ಬಳಿ ಆರೋಪಿತರನ್ನು ಬಂಧಿಸಿ 1,50,000 ಬೆಲೆಬಾಳುವ ಆಟೋರಿಕ್ಷವನ್ನು ಪತ್ತೆ ಹಚ್ಚುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ ಈ ಒಂದು ಕಾರ್ಯಕ್ಕೆ ಮೇಲಧಿಕಾರಿಗಳಾದ ಎಸ್ ಪಿ ಬಿಎಸ್ ನೇಮಗೌಡ ಅವರು ಮೆತ್ತಿಗೆಯನ್ನು ವ್ಯಕ್ತಪಡಿಸಿದ್ದಾರೆ.