LOCAL NEWS : ಶಿರಹಟ್ಟಿ ಬಸ್ ಘಟಕಕ್ಕೆ ಹೊಸ ಬಸ್ಸನ್ನು ಹಾಗೂ ಸಿಬ್ಬಂದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ!!

You are currently viewing LOCAL NEWS : ಶಿರಹಟ್ಟಿ ಬಸ್ ಘಟಕಕ್ಕೆ ಹೊಸ ಬಸ್ಸನ್ನು ಹಾಗೂ ಸಿಬ್ಬಂದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ!!

LOCAL NEWS : ಶಿರಹಟ್ಟಿ ಬಸ್ ಘಟಕಕ್ಕೆ ಹೊಸ ಬಸ್ಸನ್ನು ಹಾಗೂ ಸಿಬ್ಬಂದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ!!

ಶಿರಹಟ್ಟಿ : ಪಟ್ಟಣದ ಬಸ್ ಘಟಕಕ್ಕೆ ಸ್ಥಳೀಯ ಸಂಘ ಮತ್ತು ಹೋರಾಟ ಸಮಿತಿ ಕರವೇ ಹಾಗೂ ಕನ್ನಡ ಪರ ಹೋರಾಟಗಾರರು ಭೇಟಿ ನೀಡಿ ನಮ್ಮ ಶಿರಹಟ್ಟಿ ಘಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಘಟಕ ವ್ಯವಸ್ಥಾಪಕರ ಜೊತೆ ಚರ್ಚೆ ನಡೆಸಲಾಯಿತು.

ಮುಂದಿನ ನಾಲ್ಕೈದು ದಿನಗಳ ಒಳಗಾಗಿ ಅಂದರೆ ನವಂಬರ್ 08 ಮತ್ತು ನವಂಬರ್ 12ರ ಒಳಗಾಗಿ ಶಿರಹಟ್ಟಿ ಘಟಕಕ್ಕೆ ಸಿಬ್ಬಂದಿಗಳು ಹಾಗೂ ಹೊಸ ಬಸ್ಸುಗಳನ್ನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದೇವೆ.

ನಮ್ಮ ಮನವಿಗೆ ಸ್ಪಂದಿಸದೆ ಇದ್ದಲ್ಲಿ ನವಂಬರ್ 13ರಂದು ಬುಧವಾರ ದಿವಸ ಶಿರಹಟ್ಟಿ ಘಟಕದ ಎದುರುಗಡೆ ಪಟ್ಟಣದ ಹಿರಿಯರು ಸಂಘ ಸಂಸ್ಥೆಗಳು ಕನ್ನಡಪರ ಹೋರಾಟಗಾರರು ಪಟ್ಟಣದ ನಾಗರಿಕರು ಎಲ್ಲರೂ ಸೇರಿಕೊಂಡು ಬಸ್ ಘಟಕದ ಎದುರುಗಡೆ ಉಪವಾಸ ಸತ್ಯಾಗ್ರಹ ಹಾಗೂ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಕ್ಬರ್ ಸಾಬ್ ಯಾದಗಿರಿ, ಈರಣ್ಣ ಬಾಗೇವಾಡಿ, ರಫೀಕ್ ಕೆರಿಮನಿ, ಬಸಣ್ಣ ಕರಿಗಾರ್, ಮುನ್ನಾ ಡಲಾಯಿತ, ಅಕ್ಬರ್ ಆದ್ರಳ್ಳಿ, ಗೌಸ್ ಕಲಾವಂತ್, ಮಲ್ಲು ಸುರಣಗಿ ಇನ್ನುಅನೇಕ ಸಂಘಟನೆಯ ಸದಸ್ಯರು ಹಾಜರಿದ್ದರು.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!