LOCAL NEWS : ಯಲಬುರ್ಗಾ ಕ್ಷೇತ್ರವು ಬಿಜೆಪಿ ಸಂಘಟನಾ ಶಕ್ತಿಯಲ್ಲಿ ಜಿಲ್ಲೆಗೆ ಮಾದರಿ : ಮಾಜಿ ಸಚಿವ ಹಾಲಪ್ಪ ಆಚಾರ್
ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಜಿಲ್ಲೆಗೆ ಮಾದರಿಯಾಗಿದೆ. ಇಲ್ಲಿವರೆಗೆ 33 ಸಾವಿರ ಸದಸ್ಯರ ನೋಂದಣಿಯಾಗಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಮಾಜಿ ಸಚಿವ, ಮಾಜಿ ಶಾಸಕ ಹಾಲಪ್ಪ ಆಚಾರ್ ತಿಳಿಸಿದರು.
ಇಂದು ತಾಲೂಕಿನ ಮಸಬಹಂಚಿನಾಳ ಬಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಭಾ.ಜ.ಪಾ ಯಲಬುರ್ಗಾ ಮಂಡಲದ ಸಂಘಟನಾ ಪರ್ವ ಕಾರ್ಯಾಗಾರ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ‘ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾ ವಿಚಾರದಲ್ಲಿ ಮಹತ್ತರ ಸಾಧನೆ ಮಾಡಿದ್ದು, ಸಂಘಟನಾ ಪರ್ವಕ್ಕೆ ಪ್ರಮಾಣೀಕ, ನಿಷ್ಠವಂತ ಕಾರ್ಯಕರ್ತರ ಪಡೆಯ ಮುಖ್ಯ ಕಾರಣ’ ಎಂದು
‘ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಭ್ರಷ್ಟಾಚಾರದ ಹಗರಣಗಳು ಹೊರಬರುತ್ತವೆ. ಹಾಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಮಾಯವಾಗಿದೆ. ಇವರ ಹಣೆಬರಕ್ಕೆ ಈ ಹಿಂದಿನ ಸರ್ಕಾರ ಮಾಡಿದಂತಹ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗ್ತಾ ಇಲ್ಲ. ನಮ್ಮ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರು ಒಂದೇ ಒಂದು ಕೆರೆ ಕೂಡ ತುಂಬಿಸಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಇವರು ರೈತ ವಿರೋಧಿ ಸರ್ಕಾರವೆಂದು. ರಾಜ್ಯದಲ್ಲಿ ವಾಲ್ಮೀಕಿ ನಿಗಮ ಹಗರಣ, ಮೂಡಾ ಹಗರಣ ಇದೀಗ ವಕ್ಫ್ ಬೋರ್ಡ್ ಅವಾಂತರ ಈ ಮೂಲಕ ರೈತರ ಜಮೀನನ್ನು ಕಬಳಿಸುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಜಿಲ್ಲಾ ಉಪಾಧ್ಯಕ್ಷ ಮಹೇಶ, ಜಿಲ್ಲಾ ಖಜಾಂಚಿ ನರಸಿಂಗ ರಾವ ಕುಲಕರ್ಣಿ, ಪ್ರಮುಖ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಸಿ ಎಚ್ ಪಾಟೀಲ್, ಬಸನಗೌಡ ತೊಂಡಿಹಾಳ, ಶರಣಪ್ಪ ಬಣ್ಣದ ಬಾವಿ, ಅಂದಯ್ಯ ಹಿರೇಮಠ, ಶಂಕ್ರಪ್ಪ ಸುರಪೂರ, ರಾಜ್ಯ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಶಿವಲೀಲಾ ದಳವಾಯಿ, ಲಕ್ಷ್ಮಣ ಕಾಳಿ,ಮಂಡಲ ಪ್ರ.ಕಾರ್ಯದರ್ಶಿ ಅಮರೇಶ ಹುಬ್ಬಳ್ಳಿ, ಮಲ್ಲಿಕಾರ್ಜುನ ಹುಲ್ಲೂರ, ರಾಚಪ್ಪ ಹುರುಳಿ, ಪಕೀರಪ್ಪ ತಳವಾರ, ಗಾಳೆಪ್ಪ ಓಜಿನಳ್ಳಿ, ದತ್ತನಗೌಡ ಪಾಟೀಲ್, ಸಿದ್ದು ಮಣ್ಣಿನವರ್, ಶ್ರೀಮತಿ ಮಹೇಶ್ವರಿ ಸಾವಳಗಿಮಠ, ಹಾಗೂ ಪಕ್ಷದ ಪದಾಧಿಕಾರಿಗಳು, ಕುಕನೂರ-ಯಲಬುರ್ಗಾ ಪಟ್ಟಣ ಪಂಚಾಯತ ಸದಸ್ಯರು, ಮೊರ್ಚಾಗಳ ಪದಾಧಿಕಾರಿಗಳು, ಶಕ್ತಿ ಕೇಂದ್ರಗಳ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.