ಪ್ರಜಾವೀಕ್ಷಣೆ ವಾರ್ತೆ :-
LOCAL NEWS : ಬಸ್ ಡಿಪೋ ಅವ್ಯವಸ್ಥೆ : ಜಿಲ್ಲಾ ಸಾರಿಗೆ ಕೆಎಸ್‌ಆರ್‌ಟಿಸಿ ಡಿ ಸಿ ಭೇಟಿ..!
ಶಿರಹಟ್ಟಿ : ಪಟ್ಟಣದಲ್ಲಿ ಬಸ್ ಘಟಕ ಪ್ರಾರಂಭವಾಗಿ ಹಲವು ವರ್ಷಗಳು ಕಳೆದರೂ ಸಹ ಈ ವರೆಗೂ ಯಾವುದೇ ವಿಭಾಗದಲ್ಲಿ ಅಭಿವೃದ್ದಿ ಹೊಂದದೇ ಇರುವದರಿಂದ ಕಳೆದ ಶುಕ್ರವಾರ ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ನವಂಬರ್ 12ರವರೆಗೂ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಗಡುವು ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ಗದಗ ಜಿಲ್ಲಾ ಸಾರಿಗೆ ಡಿಸಿ ಡಿ ಎಮ್. ದೇವರಾಜ ಸೋಮವಾರ ಬಸ್ ಡಿಪೋಗೆ ಭೇಟಿ ನೀಡಿದರು. ಗಡುವು ನೀಡಿದ ಸಂಘಟನೆಗಳ ಜೊತೆ ಸಭೆಯನ್ನು ನಡೆಸಿ, ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್‌ಗಳು ಸಂಚರಿಸುತ್ತಿಲ್ಲ ಹಾಗೂ ಹಲವಾರ ಸಮಸ್ಯಗಳನ್ನು ಆಲಿಸಿದರು.
ಬಳಿಕ ಗದಗ ಸಾರಿಗೆ ಡಿಸಿ ಡಿ ಎಮ್. ದೇವರಾಜ ಮಾತನಾಡಿ, “ಸಂಘಟನೆಗಳ ಹಾಗೂ ಸಾರ್ವಜನಿಕರಿಂದ ೪೦ ಅನಸೂಚಿಗಳನ್ನು ಮಾಡಬೇಕೆನ್ನುವ ಬೇಡಿಕೆ ಇದೆ. ಸದ್ಯಕ್ಕೆ ಅನುಸೂಚಿಗಳನ್ನು ಮಾಡುತ್ತೇವೆ. ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ 35 ಅನುಸೂಚಿಗಳನ್ನು ಪೂರ್ಣಗೊಳಿಸುತ್ತೇವೆ ಎಂದರು.
ನವಂಬರ್ ತಿಂಗಳಲ್ಲಿ ಎರಡು ಹೊಸಗಳು ಬರುತ್ತೇವೆ ಹಾಗೂ ಡಿಸೆಂಬರನಲ್ಲಿ ಎರಡು ಹೊಸ ಬಸ್‌ಗಳನ್ನು ಕೊಡಲಾಗುವುದು. ಬಸ್ ನಿಲ್ದಾಣದಲ್ಲಿ ಶೆಲ್ಟರ್‌ಗಳ ವ್ಯವಸ್ಥೆ ಹಾಗು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆರ್ ಬಿ. ಕಮತ, ಹುಮಾಯೂನ್ ಮಾಗಡಿ, ಎಂ ಕೆ. ಲಮಾಣಿ, ನಾಗರಾಜ ಲಕ್ಕುಂಡಿ, ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷ ಅಕ್ಬರಸಾಬ ಯಾದಗಿರಿ, ಕರವೇ ಅಧ್ಯಕ್ಷ ರಫೀಕ್ ಕೆರಿಮನಿ, ಶ್ರೀನಿವಾಸ ಬಾರಬಾರ, ಜಾಕೀರ ಕೋಳಿವಾಡ, ರಾಜು ಶಿರಹಟ್ಟಿ, ಮುನ್ನಾ ಢಾಲಾಯಿತ, ಶ್ರೀನಿವಾಸ ಕಪಟಕರ ಹಾಗೂ ಇನ್ನು ಅನೇಕರು ಇದ್ದರು.
ವರದಿ: ವೀರೇಶ್ ಗುಗ್ಗರಿ