BREAKING : ಗಾಂಜಾ ಬೆಳೆದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳಿಂದ ದಾಳಿ…!!
ಗದಗ : ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಗಾಂಜಾ ಬೆಳೆಯಿದ್ದ ಹೊಲಕ್ಕೆ ಅಬಕಾರಿ ಅಧಿಕಾರಿಗಳಿಂದ ದಾಳಿ ನಡೆಸಿ 10,000 ಸಾವಿರ ರೂಪಾಯಿ ಬೆಲೆಬಾಳುವ 250 ಗ್ರಾಂ ತೂಕದ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ.
ಕಡಕೋಳ ಗ್ರಾಮದ ನಿವಾಸಿ ಮಲಕಾಜ್ಜಪ್ಪ ತುದಿಗಲ್ ಎಂಬುವರ ಜಮೀನಿನಲ್ಲಿ ಗಾಂಜಾ ಗಿಡ ಇರುವ ಬಗ್ಗೆ ಅಬಕಾರಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು 21 /2 ಅಡಿ 2 ಗಾಂಜಾ ಗಿಡಗಳನ್ನು ಹಾಗೂ 1/2 ಅಡಿಯಲ್ಲಿ 3 ಗಾಂಜಾ ಗಿಡಗಳು ಸೇರಿ ಒಟ್ಟು 5 ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಈ ವೇಳೆಯಲ್ಲಿ ವಲಯ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.