LOCAL NEWS : ಕೊಪ್ಪಳದ ಗವಿಮಠದ ಜಾತ್ರೆಗೆ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರಿಗೆ ಆಹ್ವಾನ..!!?

You are currently viewing LOCAL NEWS : ಕೊಪ್ಪಳದ ಗವಿಮಠದ ಜಾತ್ರೆಗೆ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರಿಗೆ ಆಹ್ವಾನ..!!?

ಪ್ರಜಾ ವೀಕ್ಷಣೆ ಸುದ್ದಿಜಾಲ :-

LOCAL NEWS : ಕೊಪ್ಪಳದ ಗವಿಮಠದ ಜಾತ್ರೆಗೆ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರಿಗೆ ಆಹ್ವಾನ..!!?

ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಪ್ರಖ್ಯಾತಿ ಕೊಪ್ಪಳ ಶ್ರೀಗವಿಮಠದ ಗವಿಸಿದ್ದೇಶ್ವರರ 2025ರ ಜಾತ್ರೆಗೆ ಈ ಬಾರಿ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರಿಗೆ ಆಹ್ವಾನನೀಡಲಾಗಿದ್ದು, ಸುದ್ದಿಯೊಂದು ಭಾರೀ ಸದ್ದು ಮಾಡುತ್ತಿದೆ. ಇದು ಸಹಜವಾಗಿ ಭಕ್ತರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಮುಂದಿನ 2025ರ ಜನವರಿ15 ರಿಂದ 15 ದಿನ ಗವಿಮಠದ ಜಾತ್ರೆ ನಡೆಯಲಿದೆ. ರಥೋತ್ಸವದಲ್ಲಿ 4 ಲಕ್ಷಕ್ಕೂ ಹೆಚ್ಚು ಭಕ್ತರು ಒಂದೆಡೆ ಸೇರುವುದು ಈ ಜಾತ್ರೆಯ ವಿಶೇಷವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ ಆರಂಭದ ಮೂರು ದಿನ ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತವೆ. ಕಳೆದ ವರ್ಷ ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು ಜಾತ್ರೆಯ ವಿಶೇಷ ಅತಿಥಿಯಾಗಿದ್ದರು.

ಈ ಬಾರಿ ಬಾಲಿವುಡ್‌ ಸ್ಟಾರ್‌ ನಟ ಅಮಿತಾಬ್‌ ಬಚ್ಚನ್‌ ಅವರನ್ನು ಕರೆಯಿಸಲು ಕೊಪ್ಪಳದ ಉದ್ಯಮಿ ಅಶ್ವಿನ್‌ ಜಾಂಗಡ ಅವರು ಗವಿಮಠದ ಪರವಾಗಿ ಇತ್ತೀಗೆ ಮುಂಬಯಿಗೆ ತೆರಳಿದ್ದರು ಎನ್ನಲಾಗಿದೆ. ಅಮಿತಾಬ್‌ ಬಚ್ಚನ್‌ ಅವರನ್ನು ಭೇಟಿಯಾದ ಈ ನಿಯೋಗ ಜಾತ್ರೆಗೆ ಆಹ್ವಾನ ನೀಡಿದೆ. ಕೆಲವೇ ದಿನಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಅಮಿತಾಬ್‌ ಬಚ್ಚನ್‌ ಅವರು ಮಠದ ನಿಯೋಗಕ್ಕೆ ಹೇಳಿದ್ದಾರೆ ಎಂದು ಸುದ್ದಿ ಹರೆದಾಡುತ್ತೀವೆ.

Leave a Reply

error: Content is protected !!