ಚಂದ್ರಶೇಖರಯ್ಯ ಹಿರೇಮಠರಿಗೆ ಇಂದು ಸಹಕಾರಿ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಕುಕನೂರ : ತಾಲೂಕಿನ ಬಾನಾಪುರ ಗ್ರಾಮದ ಚಂದ್ರಶೇಖರಯ್ಶ ಹಿರೇಮಠ ಅವರು ಯಲಬುರ್ಗಾ ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿ ಅವರ ಸಹಕಾರಿ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಲಭಿಸಿದೆ.
ನ.17 ರಂದು ಬಾಗಲಕೋಟೆಯ ತೋಟಗಾರಿಕೆ ಇಲಾಖೆಯ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಯುವ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಭಾಗವಹಿಸಲಿದ್ದಾರೆ.
Local News : ಚಂದ್ರಶೇಖರಯ್ಯ ಹಿರೇಮಠರಿಗೆ ಇಂದು ಸಹಕಾರಿ ರತ್ನ ಪ್ರಶಸ್ತಿ ಪ್ರಧಾನ,
