LOCAL NEWS : ಪದವಿ ಪೂರ್ವ ಕಾಲೇಜ್ ಆಗಿ ಉನ್ನತೀಕರಣಗೊಂಡ ಇಟಗಿ ಆದರ್ಶ ವಿದ್ಯಾಲಯ…!

You are currently viewing LOCAL NEWS : ಪದವಿ ಪೂರ್ವ ಕಾಲೇಜ್ ಆಗಿ ಉನ್ನತೀಕರಣಗೊಂಡ ಇಟಗಿ ಆದರ್ಶ ವಿದ್ಯಾಲಯ…!

ಪ್ರಜಾ ವೀಕ್ಷಣೆ ಸುದ್ದಿಜಾಲ :-

LOCAL NEWS : ಪದವಿ ಪೂರ್ವ ಕಾಲೇಜ್ ಆಗಿ ಉನ್ನತೀಕರಣಗೊಂಡ ಇಟಗಿ ಆದರ್ಶ ವಿದ್ಯಾಲಯ…!

ಕುಕನೂರ : ತಾಲೂಕಿನ ಇಟಗಿ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯವನ್ನು ಕಾಲೇಜನ್ನಾಗಿ ಉನ್ನತೀಕರಿಸಿ ಸರ್ಕಾರ ಆದೇಶಿಸಿದೆ.

ರಾಜ್ಯದಲ್ಲಿರುವ 74 ಆದರ್ಶ ವಿದ್ಯಾಲಯಗಳಲ್ಲಿ ಮೂಲಭೂತ ಸೌಲಭ್ಯಗಳು ಇರುವುದರಿಂದ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಕಾರ್ಯಕ್ರಮಕ್ಕೆ ತಗಲುವ ವೆಚ್ಚಗಳನ್ನು ಭರಿಸಲು ಆರ್ಥಿಕ ಇಲಾಖೆಯಿಂದ ಸಹಮತಿಯನ್ನು ಪಡೆದುಕೊಂಡು ಆದೇಶ ಹೊರಡಿಸಿದೆ.

ಇಟಗಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಕಾಲೇಜು ಪ್ರಾರಂಭವಾಗುವ ನಿರೀಕ್ಷೆ ಇದೆ. ಆದರ್ಶ ವಿದ್ಯಾಲಯವನ್ನು ಕಾಲೇಜನ್ನಾಗಿ ಉನ್ನತೀಕರಿಸಿದ್ದು ಸರ್ಕಾರದ ಈ ಆದೇಶದಿಂದ ತಾಲೂಕಿನ ಶಿಕ್ಷಣ ಪ್ರೇಮಿಗಳಲ್ಲಿ ಸಂತೋಷ ಉಂಟು ಮಾಡಿದೆ.

Leave a Reply

error: Content is protected !!