ಪಟ್ಟಣದ ಸೋಮೇಶ್ವರ ದೇವಾಲಯದ ಲಕ್ಷ ದೀಪೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಚಿವ HK ಪಾಟೀಲ್
ಲಕ್ಷ್ಮೇಶ್ವರ : ಇಂದು ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಅಂಗವಾಗಿ ಕಾನೂನು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಭೇಟಿ ಮಾಡಿದರು.
ಇಂದು ಸಚಿವ ಎಚ್ ಕೆ ಪಾಟೀಲ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ 2023ರ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆದ ಶ್ರೀಮತಿ ಸುಜಾತ ಎನ್, ದೊಡ್ಡಮನಿ ಅವರು ಸೋಮನಾಥನ ದರ್ಶನ ಪಡೆದು ನವ ವಧು ವರರಿಗೆ ಶುಭ ಕೋರಿದರು.
ಈ ಸಂಧರ್ಭದಲ್ಲಿ ಚನ್ನಪ್ಪ ಜಗಲಿ, ಬಾಬಣ್ಣ ಅಳವಂಡಿ, ಫಕ್ಕೀರೇಶ ಮ್ಯಾಟ್ಟಣ್ಣವರ, ತಿಪ್ಪಣ್ಣ ಸಂಶಿ, ತಾಲೂಕ್ ದಂಡಾಧಿಕಾರಿ ವಾಸುದೇವ ಸ್ವಾಮಿ, ರಾಮು ಅಡಗಿಮನಿ, ವಸಿಮ್ ಮುಚ್ಚಾಲೆ, ಮಾಂತೇಶ ಗುಡಿಸಲಮನಿ ಮತ್ತು ದೇವಸ್ಥಾನ ಆಡಳಿತ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.