JOB ALERT : ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್ ತರಬೇತಿಗಾಗಿ ಅರ್ಜಿ ಅಹ್ವಾನ..!

You are currently viewing JOB ALERT : ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್ ತರಬೇತಿಗಾಗಿ ಅರ್ಜಿ ಅಹ್ವಾನ..!
ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್ ತರಬೇತಿಗಾಗಿ ಅರ್ಜಿ ಅಹ್ವಾನ..!

ವಿಜಯನಗರ (ಹೊಸಪೇಟೆ) : ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಇಂದಿರಾಗಾAಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿಗೆ ಮ್ಯಾನ್ಯೂವಲ್ ಸ್ಕಾಂವೆAಜರ್ಸ್ ಮತ್ತು ಅವರ ಅವಲಂಭಿತ ಯುವಕ ಮತ್ತು ಯುವತಿಯರಿಗೆ ಗ್ರಾಫಿಕ್ಸ್ ಎಡಿಟಿಂಗ್ ಮತ್ತು ವಿಡಿಯೋ ಎಡಿಟಿಂಗ್ ತರಬೇತಿ ನೀಡಲು ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ.

ತರಬೇತಿಯಲ್ಲಿ ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್, ಅಡೋಬ್ ಪೋಟೋ ಶಾಪ್, ಕೊರಾಲ್ ಡ್ರಾ, ಕ್ಯಾನ್ವಾ, ಅಡೋಬ್ ಪ್ರಿಮಿಯರ್ ಪ್ರೊ, ನುಡಿ ಸಾಫ್ಟ್ವೇರ್ ಹಾಗೂ ಇತರೆ ಸ್ಕಿಲ್ ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತೆ: ಮ್ಯಾನುವಲ್ ಸ್ಕ್ಯಾವೆಂಜರ್ಸ್ ಮತ್ತು ಅವರ ಅವಲಂಭಿತರ ಯುವಕ, ಯುವತಿಯರು 18 ರಿಂದ 35 ವಯಸ್ಸಿನವರಾಗಿಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಐಡಿ ಕಾರ್ಡ್ ಇರಬೇಕು. ಅರ್ಜಿ ಸಲ್ಲಿಸಲು ನ.25 ರಂದು ಕೊನೆ ದಿನವಾಗಿದೆ.

ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿಯ ಕಂಟೋನ್‌ಮೆAಟ್‌ನ ಆದರ್ಶ ಕಾಲೋನಿಯ ಸೆಂಟ್ ಜೋಸೆಪ್ ಶಾಲೆ ಎದುರಿನ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಂಪರ್ಕಿಸುವುದು.

Leave a Reply

error: Content is protected !!