GOOD NEWS : ಇಂದಿನಿಂದ ವಿದ್ಯಾರ್ಥಿಗಳಿಗೆ ಮಾಸಿಕ 25,000 ರೂ. ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ…!!

You are currently viewing GOOD NEWS : ಇಂದಿನಿಂದ ವಿದ್ಯಾರ್ಥಿಗಳಿಗೆ ಮಾಸಿಕ 25,000 ರೂ. ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ…!!

ಪ್ರಜಾ ವೀಕ್ಷಣೆ ಡೆಸ್ಕ್ :-

GOOD NEWS : ಇಂದಿನಿಂದ ವಿದ್ಯಾರ್ಥಿಗಳಿಗೆ ಮಾಸಿಕ 25,000 ರೂ. ಸಾವಿರ ಶಿಷ್ಯವೇತನ…!!

ಚಿತ್ರದುರ್ಗ : ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್‌ಡಿ ಫೆಲೋಶಿಪ್ ಮಾಡುತ್ತಿರುವ 100 ಮಂದಿ ಎಸ್.ಟಿ.(ಪರಿಶಿಷ್ಟ ಪಂಗಡ) ಸಂಶೋದನಾ ವಿದ್ಯಾರ್ಥಿಗಳಿಗೆ ಮಾಸಿಕ 25,000 ರೂ. ಶಿಷ್ಯವೇತನಕ್ಕೆ ಆಯ್ಕೆ ಮಾಡಲು ಪರಿಶಿಷ್ಟ ವರ್ಗಗಳ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಘೋಷಣೆಯಂತೆ ಯಾವುದೇ ಫೆಲೋಶಿಪ್ ಪಡೆಯದ ಎಸ್.ಟಿ. ಸಮುದಾಯಕ್ಕೆ ಸೇರಿದ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಫ್ ನೀಡಲಾಗುವುದು. ಮುಂದಿನ ಡಿಸೆಂಬರ್.14 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ನಗರದ ಜೆ.ಸಿ.ಆರ್.ಬಡಾವಣೆ, ಗಣಪತಿ ದೇವಸ್ಥಾನದ ಹತ್ತಿರದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಚೇರಿಯಲ್ಲಿ ಇಂದಿನಿಂದ ಇದೇ (ನ.21 ರಿಂದ) ಅರ್ಜಿ ಪಡೆದು ಡಿಸೆಂಬರ್.14  ರಂದು ಸಂಜೆ 5.30ರೊಳಗೆ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.

Leave a Reply

error: Content is protected !!