ಕೊಪ್ಪಳ: ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಸಾಧಿಸಿದ್ದು, ಗ್ಯಾರಂಟಿ ಸರಕಾರಕ್ಕೆ ದೇವರು (ಮತದಾರರು) ನೀಡಿದ ತೀರ್ಪು ಎಂದು ಕೊಪ್ಪಳ ಜಿಲ್ಲೆಯ ಗ್ಯಾರಂಟಿ ಸಮಿತಿ ಸದಸ್ಯೆ ಕಾಂಗ್ರೆಸ್ ಮುಖಂಡರಾದ ಜ್ಯೋತಿ.ಎಂ. ಗೊಂಡಬಾಳ ಸಂತಸ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸಂಭ್ರಮಾಚರಣೆ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಪ್ರತಿ ನಾಯಕರ ಹಾಗು ಕಾರ್ಯಕರ್ತರ ಶ್ರಮವಿದೆ, ಪ್ರಚಾರದ ವೇಳೆಯಲ್ಲಿಯೇ ಗೆಲುವಿನ ಲಕ್ಷಣ ಗೋಚರಿಸಿತ್ತು.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ, ಜನ ಸಾಮಾನ್ಯರು, ಬಡವರು ತಮ್ಮ ಬದುಕನ್ನು ಸುಂದರವಾಗಿ ನಡೆಸುತ್ತಿದ್ದಾರೆ, ಅದಕ್ಕೆ ಬಿಜೆಪಿಯವರ ಸುಖಾಸುಮ್ಮನೆ ಮಾಡುತ್ತಿದ್ದ ಟೀಕೆಗಳನ್ನು ಲೆಕ್ಕಿಸದೇ ನಿಜವಾದ ಉತ್ತರ ಕೊಟ್ಟಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೂ ಜನ ಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಜನಪರವಾಗಿ ಕೆಲಸ ಮಾಡುತ್ತಿದೆ ನಿಶ್ಚಿತವಾಗಿ ಮುಂದೆಯೂ ನಮ್ಮ ಸರಕಾರವೇ ಅಧಿಕಾರಕ್ಕೆ ಬರುತ್ತದೆ, ಜನರು ಭಯಪಡದೇ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು, ಧರ್ಮಗಳನ್ನು ಮುಂದಿಟ್ಟು, ಸುಳ್ಳುಗಳನ್ನು ಮುಂದಿಟ್ಟು ಮಾಡುವ ರಾಜಕಾರಣ ಅಂತ್ಯವಾಗಿದೆ ಎಂದು ಸಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.
Local News : ಗ್ಯಾರಂಟಿ ಸರಕಾರವನ್ನು ಟೀಕಿಸಿದ್ದಕ್ಕೆ ದೇವರು ಕೊಟ್ಟ ಉತ್ತರ : ಜ್ಯೋತಿ
