ಕೊಪ್ಪಳ : ಜಹಗೀರ ಶಾಖಾ ಶ್ರೀ ಗವಿಮಠ ಹಿರೇಬಗನಾಳ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಮಾರುತೇಶ್ವರನ ಕಾರ್ತಿಕೋತ್ಸವ ಅಂಗವಾಗಿ 32ನೇ ವರ್ಷದ ಶ್ರೀ ಗವಿಸಿದ್ದೇಶ್ವರ ರಥೋತ್ಸವವು ನ.24 ರಂದು ಸಂಜೆ 5.30 ಕ್ಕೆ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳಾದ ಅಭಿಷೇಕ, ಕೊಂಡ ಪೂಜೆ, ಕಾರ್ತಿಕೋತ್ಸವ, ಸಣ್ಣ ರಥೋತ್ಸವ, ಗಂಗಾ ಮಾತೆಯ ದರ್ಶನ, ಬೆಳಗು ಮುಂಜಾನೆ ಶ್ರೀದೇವಿಯ ಪಾಯಸ, ಅಗ್ನಿ, ಶ್ರೀ ಮಾರುತೇಶ್ವರನ ಗಿಡ, ಅಗ್ನಿ, ಮುಳ್ಳು ಪಾಲ್ಕಿ, ಮನರಂಜನೆಯ ಅಂಗವಾಗಿ ಡೊಳ್ಳಿನ ವಾದ್ಯ ಅನ್ನಸಂತರ್ಪಣೆ, ಶ್ರೀ ಗವಿಸಿದ್ದೇಶ್ವರ ರಥೋತ್ಸವ, ಶ್ರೀಗಳಿಂದ ಆಶೀರ್ವಚನ, ಶ್ರೀ ಗವಿಸಿದ್ದೇಶ್ವರ ಮೂರ್ತಿ ಉತ್ಸವ ಹಾಗೂ ಮದ್ದಿನ ಕಾರ್ಯಕ್ರಮ, ಕಡಬಿನ ಕಾಳಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.
ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹಿರೇಸಿಂಧೋಗಿ ಕಪ್ಪತಮಠದ ಶ್ರೀ ಚಿದಾನಂದ ಸ್ವಾಮಿಗಳು, ಬೆದವಟ್ಟಿ ಹಿರೇಮಠದ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಂಗಳೂರಿನ ಅರಳಲೆ ಹಿರೇಮಠದ ಸಿದ್ದಲಿಂಗ ಶಿವಚಾರ್ಯ ಮಹಾ ಸ್ವಾಮಿಗಳು, ಹೂವಿನಹಡಗಲಿಯ ಶಾಖಾ ಗವಿಮಠದ ಹಿರೇಶಾಂತವೀರ ಮಹಾಸ್ವಾಮಿಗಳು, ಹೆಬ್ಬಾಳ ಬೃಹನ್ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಮೈನಳ್ಳಿ ಹಿರೇಮಠದ ಸಿದ್ಧೇಶ್ವರ ಶಿವಚಾರ್ಯ ಮಹಾಸ್ವಾಮಿಗಳು, ಬಳಗಾನೂರಿನ ಚಿಕ್ಕೇನಕೊಪ್ಪದ ಚೆನ್ನವೀರ ಶರಣಮಠದ ಶಿವಶಾಂತವೀರ ಶರಣರು, ಹಾಲವರ್ತಿಯ ಜಡೇಶ್ವರ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು, ವಿಜಯಪುರ ಇಟಗಿಯ ಡಾ.ಗುರುಶಾಂತವೀರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಕಮೀಟಿಯವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.