LOCAL NEWS : ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ!
ಕೊಪ್ಪಳ : ಭಾರತೀಯ ಸೇನಾ ನೇಮಕಾತಿ ಕಚೇರಿ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಲಾದ ಸೇನಾ ನೇಮಕಾತಿ ರ‍್ಯಾಲಿಗೆ ಮಂಗಳವಾರ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿದರು.
ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳ 9 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಲಿದ್ದು, ಈ ಪೈಕಿ ಮಂಗಳವಾರ ಬೆಳ್ಳಂ ಬೆಳಿಗ್ಗೆ ಕೊರೆಯುವ ಚಳಿಯಲ್ಲಿ ರ‍್ಯಾಲಿಗೆ ಆಗಮಿಸಿದರು. ಅಭ್ಯರ್ಥಿಗಳ ಮಾಹಿತಿ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿದರು. 100 ಅಭ್ಯರ್ಥಿಗಳ ತಂಡಗಳನ್ನು ಮಾಡಿ, ಓಟ, ದೈಹಿಕ ದಾರ್ಡ್ಯತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮಾಡಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಬೆಳಗಾವಿ ಸೇನಾ ನೇಮಕಾತಿ ಅಧಿಕಾರಿ ಮೇಜರ್ ವಿಶ್ವನಾಥ, ಸುಬೇದಾರ ಮೇಜರ್ ಡಿ.ಆರ್.ಲೋಹಿಯಾ ಮತ್ತು ಸುಬೇದಾರ ಮಲಕೀತ್ ಸಿಂಗ್ ಇದ್ದರು.