LOCAL NEWS : ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸಿಗೆ ತಲಾ ಒಂದು ಸ್ಥಾನ!
ಕೊಪ್ಪಳ : ನಗರಸಭೆಯ ೮ ಮತ್ತು 11ನೇ ವಾರ್ಡಿನ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, 8ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಕವಿತಾ ಗಾಳಿ ಮತ್ತು 11ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಆಡೂರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಎರಡು ವಾರ್ಡುಗಳಲ್ಲಿ ಒಂದು ಕಾಂಗ್ರೆಸ್ ಮತ್ತು ಒಂದು ಬಿಜೆಪಿ ತೆಕ್ಕೆಗೆ ಬಂದಂತಾಗಿದೆ.
8ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಕವಿತಾ ಬಸವರಾಜ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಪೂಜಾಗ ಸ್ಪರ್ಧಿಸಿದ್ದರು. 8ನೇ ವಾರ್ಡಿನಲ್ಲಿ 1407 ಮತದಾರರಿದ್ದು, 928ಜನರು ಮತದಾನ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ಸಿನ ರೇಣುಕಾ ಪೂಜಾರ 436 ಮತ ಪಡೆದಿದ್ದು, ಬಿಜೆಪಿಯ ಕವಿತಾ ಗಾಳಿ 486 ಮತ ಬಂದಿವೆ. 6 ನೋಟಾ ಮತಕ್ಕೆ ಬಿದ್ದಿದ್ದು, ಈ ಮೂಲಕ ಬಿಜೆಪಿಯ ಕವಿತಾ ಗಾಳಿ ೫೦ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ .
11ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆಡೂರು ರಾಜಶೇಖರ ಸ್ಪರ್ಧಿಸಿದ್ದರು. ೧೧ನೇ ವಾರ್ಡಿನಲ್ಲಿ 1087 ಮತದಾರರಿದ್ದು, 707 ಜನರು ಮತದಾನ ಮಾಡಿದ್ದಾರೆ. ಬಿಜೆಪಿಯ ಚನ್ನಬಸಪ್ಪ ಗಾಳಿ ಕೇವಲ 165 ಮತ ಪಡೆದಿದ್ದು, ಕಾಂಗ್ರೆಸ್ಸಿನ ರಾಜಶೇಖರ ಆಡೂರು 517 ಮತಗಳಿಸಿದ್ದಾರೆ. 25 ಮತಗಳು ನೋಟಾಕ್ಕೆ ಬಿದ್ದಿವೆ. ಈ ಮೂಲಕ 352 ಮತಗಳ ಅಂತರದಿಂದ ಕಾಂಗ್ರೆಸ್ಸಿನ ರಾಜಶೇಖರ ಆಡೂರು ಗೆಲುವು ಸಾಧಿಸಿದ್ದಾರೆ.