BREAKING : ಕೊಪ್ಪಳದ ನಗರವೊಂದಲ್ಲಿ 60 ವಿದ್ಯಾರ್ಥಿಗಳಿದ್ದ KSRTC ಬಸ್ ಪಲ್ಟಿ…!!
ಕೊಪ್ಪಳ : ಪಟ್ಟಣದ ಪ್ರಗತಿ ನಗರದ ಹತ್ತಿರ ಕರ್ನಾಟಕ ರಸ್ತೆ ಸಾರಿಗೆಯ ಬನ್ನೊಂದು ಇಂದು ನಸುಕಿನ ಜಾವ ಪಲ್ಟಿಯಾಗಿದೆ.
ಈ KSRTC ಬಸ್‌ನಲ್ಲಿ 60 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವಾಸಕ್ಕೆಂದು ಬಸ್‌ನಲ್ಲಿ ಹೊರಟಿದ್ದರು ಎಂದು ವರದಿಯಾಗಿದೆ. ಇನ್ನಷ್ಟು ಮಾಹಿತಿ ಬರಬೇಕಿದೆ.