Local News : ಮಂಡಲಗಿರಿ ಗ್ರಾ,ಪಂ, ಅಧ್ಯಕ್ಷರಾಗಿ ನಿಂಗಮ್ಮ ದ್ಯಾಮನಗೌಡ್ರು ಅವಿರೋಧ ಆಯ್ಕೆ

You are currently viewing Local News : ಮಂಡಲಗಿರಿ ಗ್ರಾ,ಪಂ, ಅಧ್ಯಕ್ಷರಾಗಿ ನಿಂಗಮ್ಮ ದ್ಯಾಮನಗೌಡ್ರು ಅವಿರೋಧ ಆಯ್ಕೆ

ಕುಕನೂರ : ತಾಲೂಕಿನ ಮಂಡಲಗಿರಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ನಿಂಗಮ್ಮ ಸಿದ್ದನಗೌಡ ದ್ಯಾಮನಗೌಡ್ರು ಹಾಗೂ ಉಪಾಧ್ಯಕ್ಷರಾಗಿ ಬಸ್ಸಮ್ಮ ಬಸಯ್ಯ ಸಸಿಮಠ ಅವಿರೋಧವಾಗಿ  ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷರಾಗಿದ್ದ ದೇವಕ್ಕ ಇಳಿಗೆರ ಹಾಗೂ ಉಪಾಧ್ಯಕ್ಷರಾದ ಮಹೇಂದ್ರ ಗದಗ ಇವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ  ನೆಡದಿದ್ದು  ಎರಡು ಸ್ಥಾನಕ್ಕೂ ಕೇವಲ ಒಂದೊಂದು  ನಾಮಪತ್ರಗಳು ಮಾತ್ರ ಸಲ್ಲಿಕೆ ಆದ್ದರಿಂದ ನಿಂಗಮ್ಮ ಸಿದ್ದನಗೌಡ ದ್ಯಾಮನಗೌಡ್ರು ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಬಸಮ್ಮ ಬಸಯ್ಯ ಸಸಿ ಮಠ ಇವರನ್ನು ಉಪಾಧ್ಯಕ್ಷರಾಗಿ  ಆಯ್ಕೆ ಮಾಡಲಾಗಿದೆ ಎಂದು   ಚುನಾವಣಾ ಅಧಿಕಾರಿಯಾದ ತಹಸಿಲ್ದಾರ ಪ್ರಾಣೇಶ್ ಹೆಚ್ ತಿಳಿಸಿದರು.

ಈ ವೇಳೆಯಲ್ಲಿ ಪ್ರಮುಖರಾದ ಹನುಮಂತಪ್ಪ ಉಪ್ಪಾರ, ವೀರನಗೌಡ ನಾಗನಗೌಡರು, ಜಯಪ್ರಕಾಶ್ ಗೌಡ ಪೊಲೀಸ್ ಪಾಟೀಲ್, ಶ್ರೀಧರ ದೇಸಾಯಿ, ಭೀಮರೆಡ್ಡಿ ಶಾಡ್ಲಗೇರಿ, ವೆಂಕಟೇಶ ಈಳಿಗೆರ, ಮಹಮ್ಮದ್ ರಫಿ ಮಂಡಲಗಿರಿ, ಗುರು ಸಿದ್ದಪ್ಪ ಗಿಡ್ಡರ, ಶಿವಮೂರ್ತಿ ದಳವಾಯಿ,ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿ ಮನೋರಮ ಪಾಟೀಲ, ಕಾರ್ಯದರ್ಶಿ ಸರಿತಾ ರಾಥೋಡ, ಹಾಗೂ ಇತರರಿದ್ದರು.

Leave a Reply

error: Content is protected !!