ಕುಕನೂರು : ಜಿಲ್ಲಾ ಮಟ್ಟದ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆ ಮಂಜೂರಾಗಿದ್ದು ಅದನ್ನು ಕುಕನೂರು ಪಟ್ಟಣದಲ್ಲಿ ಅದನ್ನು ನಿರ್ಮಿಸಲಾಗುತ್ತದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಶುಕ್ರವಾರ ಪಟ್ಟಣದ ಪಶು ಆಸ್ಪತ್ರೆಗೆ ಭೇಟಿ ನೀಡಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆಗಳನ್ನು ಮಂಜೂರು ಮಾಡಲಾಗಿದೆ. ಅದೇ ರೀತಿಯಾಗಿ ಕೊಪ್ಪಳ ಜಿಲ್ಲೆಗೂ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆ ಮಂಜೂರಾಗಿದ್ದು, ಅದನ್ನು ಕುಕನೂರ ಪಟ್ಟಣದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಭಾಗಗಳಲ್ಲಿ ಇಂತಹ ಆಸ್ಪತ್ರೆಗಳನ್ನು ನಿರ್ಮಣ ಮಾಡುವುದರಿಂದ ಗ್ರಾಮೀಣ ಭಾಗದ ರೈತರಿಗೆ ಇದರಿಂದ ಅನಕೂಲವಾಗಿದೆ. ದನ,ಕರುಗಳ ಆರೋಗ್ಯಕ್ಕಾಗಿ ದೂರದ ಊರುಗಳಿಗೆ ಹೋಗುವುದು ತಪ್ಪುತ್ತದೆ. ಎಕ್ಸರೇ, ಎಂಡೋಕ್ಸೋಪಿ, ಎಂಡೋಕ್ರೋಪಿ, ಸರ್ಜರಿ, ರಕ್ತ ಪರೀಕ್ಷೆಯಂತಹ ಸೌಲಭ್ಯಗಳು ದೊರೆಯಲಿವೆ. ಇದರ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ನೀಡವ ಕೆಲಸವಾಗಬೇಕಿದೆ. ಶಿಘ್ರದಲ್ಲಿಯೇ ಆಸ್ಪತ್ರೆಯ ಕಟ್ಟಣದ ಕಾಮಗಾಗಿ ಈಗೀನ ಪಶು ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಲಿದೆ ಎಂದರು. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ನೆಡೆದಿವೆ. ಆದರೆ ಕೆಲ ಕಾಮಗಾರಿಗಳಿಗೆ ಜಮೀನು ಸಿಗುತ್ತಿಲ್ಲ ಇದರಿಂದ ಕಾಮಗಾರಿಗಳು ತಡವಾಗಿವೆ ಎಂದರು. ಈ ಹಿಂದೆ ಪಟ್ಟಣದ ಕೆಲ ದಾನಿಗಳು ಜಮೀನು ನೀಡಿದ್ದನ್ನು ಸ್ಮರಿಸಿದರು. ಆ ಜಮೀನಿನಲ್ಲಿ ನಿರ್ಮಾಣವಾದ ಕಲ್ಯಾಣ ಮಂಟಪವನ್ನು ಅಭಿವೃದ್ದಿ ಪಡಿಲಾಗುವುದು ಇದರಿಂದ ಸಾರ್ವಜನಿಕರಿಗೆ ಕಾರ್ಯಕ್ರಮಗಳನ್ನು ನಡೆಸಲು ಅನಕೂಲವಾಗಲಿದೆ ಎಂದ ಅವರು, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಿಎ ಸೈಟ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಹಾಗೂ ತಾಲೂಕಿನ ಇಓಗಳಿಗೆ ತಿಳಿಸಿದ್ದು, ಸಿಎ ಸೈಟುಗಳಲ್ಲಿ ಅಚ್ಚುಕಟ್ಟಾದ ಪಾರ್ಕ, ಅಂಗನವಾಡಿ ಕೇಂದ್ರ ಅಥವಾ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಚಿಂತನೆ ನೆಡೆಸಲಾಗಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಪಶು ಉಪನಿರ್ದೇಶಕ ಮಲ್ಲಯ್ಯ ಮಾತನಾಡಿ ಶಾಸಕರ ದೂರ ದೃಷ್ಟಿ ಹಾಗೂ ಅವರ ಶಿಪಾರಸ್ಸಿನಿಂದಾಗಿ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆ ಮಂಜೂರಾಗಿದೆ ಇದರಿಂದ ಮುಂದಿನ ದಿನ ಮಾನಗಳಲ್ಲಿ ಜಿಲ್ಲೆಯ ರೈತಾಪಿ ವರ್ಗಕ್ಕೆ ಬಹಳ ಉಪಯೋಗವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿಗಳಾದ ಶಿವರಾಜ್ ಶೇಟ್ಟರ್, ಸುರೇಶ ಹಾಗೂ ಮುಖಂಡರಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಕಾಸೀಂಸಾಬ್ ತಳಕಲ್, ಸಂಗಮೇಶ ಗುತ್ತಿ, ನೂರೂದ್ದೀನ್‌ಸಾಬ ಗುಡಿಹಿಂದಲ್, ಗಗನ್ ನೋಟಗಾರ, ರಾಮಣ್ಣ ಬಂಕದಮನಿ, ಹಾಗೂ ಇತರರಿದ್ದರು,