ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನೆಡೆಸಿದ್ದಾರೆ.
ಕೊಪ್ಪಳ,: ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದ್ದು, ದಾಖೆಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಕೊಪ್ಪಳ ನಗರದ ಬಿಟಿ ಪಾಟೀಲ್ ನಗರದಲ್ಲಿರುವ ಅಬಕಾರಿ ಇಲಾಖೆ ಕಚೇರಿ ಹಾಗೂ ಡಾಲರ್ಸ್ ಕಾಲೋನಿಯಲ್ಲಿರುವ ರಮೇಶ ಅಗಡಿಯ ಬಾಡಿಗೆ ಮನೆ ಮೇಲೆ ದಾಳಿಯಾಗಿದೆ. ಅವರ ಸ್ವಗ್ರಾಮ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ರಮೇಶ ಅಗಡಿ ಅಲ್ಲಿ ಹೊಂದಿರುವ ತೋಟದ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಲೋಕಾಯುಕ್ತ ಡಿವೈಎಸ್ಪಿ ಈಶಪ್ಪ ಈಟಿ ತಂಡದಿಂದ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.