LOCAL NEWS : ವೃತ್ತಿ ರಂಗ ಭೂಮಿಗೆ ಸರ್ಕಾರ ಸಹಾಯ ನೀಡಲಿ : ಶ್ರೀಕಂಠೇಶ..!
ಕುಕನೂರು : ವೃತ್ತಿ ರಂಗ ಭೂಮಿ ಕಲಾವಿದರ ಜೀವನ ದುಸ್ಥರವಾಗಿದ್ದು ವೃತ್ತಿ ರಂಗ ಭೂಮಿ ಹಾಗೂ ಕಲಾವಿದರು ಜೀವನ ನೆಡೆಸಲು ಸರ್ಕಾರ ಸಹಾಯ ನೀಡಲಿ ಎಂದು ಕೆ.ಬಿ.ಆರ್ ಡ್ರಾಮ ಕಂಪನಿಯ ಮಾಲೀಕ, ಕಲಾವಿದ ಚಿಂದೋಡಿ ಶ್ರೀಕಂಠೇಶ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಿ.15 ರಂದು ನೆಡೆಯಲಿರುವ ಶ್ರೀ ಗುದ್ನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕೆ.ಬಿ.ಆರ್. ಡ್ರಾಮಾ ಕಂಪನಿಯು ನಾಟಕ ಪ್ರಾರಂಭ ಮಾಡಿದ್ದು ಪ್ರತಿ ದಿನ 2 ಆಟಗಳು ನೆಡೆಯಲಿವೆ ಎಂದು ತಿಳಿಸದರು.
ನಿಂದಿಗೆಡಿಶ್ಯಾಳ ಬಸಲಿಂಗಿ ಎಂಬ ಸ್ವರಚಿತ ನಾಟಕವು ಸಾಮಾಜಿಕ ಸಂದೇಶ ಸಾರುವದ ಜೊತೆಗೆ ಹಾಸ್ಯವನ್ನು ಹೊಂದಿದ್ದು, ಕಲಾ ಆಸಕ್ತರು, ಕಲಾ ಪೋಷಕರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವಿಕ್ಷಣೇಗೆ ಬರಬೇಕು. ನಾಟಕದಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಾಟಕವನ್ನು ಪ್ರದರ್ಶನ ನಡೆಯಲಿದೆ.
ನಾಟಕದಲ್ಲಿ ಚಿಂದೋಡಿ ವಿಜಯಕುಮಾರ್, ತಾಳಿಕೋಟಿ ಮಾಂತೇಶ, ರಾಘವೇಂದ್ರ ಬೆಂಗಳೂರು ಹಾಗೂ ಇತರೆ ಕಲಾವಿದರು ಇರಲಿದ್ದಾರೆ. ನಾಟಕ ಕಂಪನಿಗಳು ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದೆ. ಆದರೆ ಸರ್ಕಾರದ ತಿರಸ್ಕಾರದ ಮನೋಭಾವನೆಯಿಂದ ವೃತ್ತಿ ರಂಗ ಭೂಮಿ ನಶಿಸುವ ಹಂತಕ್ಕೆ ಬಂದಿದ್ದು, ಸರ್ಕಾರ ವೃತ್ತಿ ರಂಗಭೂಮಿಗೆ ಸಹಾಯ ನೀಡಲು ಕ್ರಮವಹಿಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆ.ಬಿ.ಆರ್. ಡ್ರಾಮ ಕಂಪನಿಯಿಂದ ದಿ.ಡಿ,೧೧ ರಿಂದ ಪ್ರಾರಂಭವಾಗುವ ನಾಟಕಗಳ ಪೋಸ್ಟರ್ ಪ್ರದರ್ಶನಗೊಳಿಸಿರುವುದು.
ಈ ಸಂದಂರ್ಭದಲ್ಲಿ ಪ್ರಮುಖರಾದ ಕಳಕನಗೌಡ ತೊಂಡಿಹಾಳ, ವಿನಾಯಕ ಬೆನಳ್ಳಿ, ಲಕ್ಷ್ಮಣ್ ಹಾಗೂ ಇತರರಿದ್ದರು.