LOCAL NEWS : ಸ್ವಾತಂತ್ರ್ಯ ಹೋರಾಟದಲ್ಲಿ ರಂಗ ಭೂಮಿ ಕೊಡುಗೆ ಅಪಾರ : ಹರೀಶ್ ಹಿರಿಯೂರು

You are currently viewing LOCAL NEWS : ಸ್ವಾತಂತ್ರ್ಯ ಹೋರಾಟದಲ್ಲಿ ರಂಗ ಭೂಮಿ ಕೊಡುಗೆ ಅಪಾರ : ಹರೀಶ್ ಹಿರಿಯೂರು

ಕಾಮಿಡಿ ಕಿಲಾಡಿ ವಿನ್ನರ್ ಹರೀಶ್ ಹಿರಿಯೂರು ಹೇಳಿಕೆ.

ಕುಕನೂರು  : ಪ್ರಾಚೀನ ಕಾಲದಿಂದಲೂ ರಂಗಭೂಮಿ ಕಲೆ ಇದೆ, ಅದರಲ್ಲೂ  ಸ್ವಾತಂತ್ರ್ಯ ಹೋರಾಟದಲ್ಲಿ ರಂಗ ಭೂಮಿ ಕೊಡಿಗೆ ಅಪಾರವಾಗಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹರೀಶ್ ಹಿರಿಯೂರು ಹೇಳಿದರು.

ಪಟ್ಟಣದಲ್ಲಿ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘ ಮಂಡಲಗಿರಿ ಇವರ ಹಾಕಿರುವ ನಾಟಕದ ಭವ್ಯ ರಂಗ ಸಜ್ಜಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣದ ಶ್ರೀ ಗುದ್ನೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘ ಮಂಡಲಗಿರಿ ಇವರಿಂದ ನಡೆಯುತ್ತಿರುವ ನಾಟಕಗಳು ಭರ್ಜರಿ ಪ್ರದರ್ಶಗೊಳ್ಳುತ್ತಿದ್ದೆ. ಪ್ರತಿದಿನ ನಾಟಕ ವಿಕ್ಷಣೇ ನೋಡಲು ಸಾಕಷ್ಟು ಬರುತ್ತಿದ್ದಾರೆ. ರಂಗಭೂಮಿ ಕಲೆಯು ಪ್ರಾಚೀನ ಕಾಲದಿಂದಲೂ ನೆಡೆದುಕೊಂಡು ಬಂದಿದೆ. ಸ್ವಾಂತತ್ರö್ಯ ಹೋರಾಟದಲ್ಲಿ ರಂಗಭೂಮಿ ಕೊಡುಗೆ ಅಪವಾರವಾಗಿದೆ. ಸ್ವಾಂತತ್ರö್ಯ ಹೋರಾಟದ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ ನಾಟಕ ಪ್ರದರ್ಶನ ಮಾಡಿ ಬಂದ ಹಣದಿಂದ ಸಂಘಟನೆ ಮಾಡಿ ಹೋರಾಟ ಮಾಡಿದ ಉದಾಹರಣೆ ಇದೆ ಎಂದರು.

ಬಳಿಕ ಕಂಪನಿಯ ಮಾಲೀಕರಾದ ಕುಮಾರ ಮಂಡಲಗಿರಿ ಮಾತನಾಡಿ ನಾನು ಸಹಿತ ಸ್ಥಳೀಯ ಮಂಡಲಗಿರಿ ಗ್ರಾಮದ ಕಲಾವಿದನಾಗಿದ್ದು, ಸ್ಥಳೀಯರ ಸಹಕಾರ ಹಾಗೂ ಸಹಾಯ ಅವಶ್ಯವಾಗಿದೆ. ಆದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವಿಕ್ಷಣೆ ಮಾಡಿ ಕಂಪನಿ ಹಾಗೂ ಕಲಾವಿದರನ್ನು ಬೆಳಸಬೇಕು ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಕಲಾವಿದರಾದ ವಿಜಯಕುಮಾರ ಹೆಗಡೆ, ಕುಮಾರ, ಕರಿಯಪ್ಪ ಹಳ್ಯಾಳ, ಮಾಂತಯ್ಯ ಜೇವರ್ಗಿ ಹಾಗೂ ಇತರರಿದ್ದರು.

Leave a Reply

error: Content is protected !!