LOCAL NEWS : ಲಕ್ಷಾಂತರ ಭಕ್ತರ ಮಧ್ಯ ಸಂಪನ್ನಗೊಂಡ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವ..!!

You are currently viewing LOCAL NEWS : ಲಕ್ಷಾಂತರ ಭಕ್ತರ ಮಧ್ಯ ಸಂಪನ್ನಗೊಂಡ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವ..!!

ಪ್ರಜಾವೀಕ್ಷಣೆ ಸುದ್ದಿಜಾಲ:-

LOCAL NEWS : ಲಕ್ಷಾಂತರ ಭಕ್ತರ ಮಧ್ಯ ಸಂಪನ್ನಗೊಂಡ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವ..!!

ಕುಕನೂರು (ಡಿ.15) : ಕೊಪ್ಪಳ ಜಿಲ್ಲೆಯ ಎರಡನೇಯ ಅತೀದೊಡ್ಡ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿರುವ ಗುದ್ನೇಶ್ವರ ಪಂಚಕಳಸಾ ಮಹಾರಥೋತ್ಸವವೂ ಸರಿ ಸುಮಾರು 2 ಲಕ್ಷ ಭಕ್ತರ ಜಯಘೋಷದ ನಡುವೆ ಅದ್ಧೂರಿಯಾಗಿ ಜರುಗಿತು. ಮಹಾರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತರು ತಮ್ಮ ಮನಪೂರ್ವಕ ಭಕ್ತಿ ಮೆರೆದಿದ್ದು ಕಂಡು ಬಂದಿತು.

ಶ್ರೀ ಗುದ್ನೇಶ್ವರ ರಥೋತ್ಸವ ಬರೋಬ್ಬರಿ 1:30 ಗಂಟೆಗಳ ಕಾಲ ಜರುಗಿತು. ಈ ವೇಳೆಯಲ್ಲಿ ಭಕ್ತ ವೃಂದ ರಥೋತ್ಸವವನ್ನು ಕಣ್ತುಂಬಿಕೊಂಡರು. ಶ್ರೀ ಗುದ್ನೇಶ್ವರ ರಥವು ಪಾದಗಟ್ಟೆಯವರೆಗೆ ಸುಮಾರು 1 ಕಿಮೀ ದೂರವಿದ್ದು, ಪಾದಗಟ್ಟೆಗೆ ರಥೋತ್ಸವ ತೆರಳಿ ಮೂಲ ಸ್ಥಾನಕ್ಕೆ ಮರಳುವುದು. ಹೀಗಾಗಿ ಗುದ್ನೇಶ್ವರ ರಥೋತ್ಸವ 2 ಕಿಮೀ ದೂರವನ್ನು ಕ್ರಮಿಸಿ ಸಂಪನ್ನಗೊಂಡಿತು. ಸಂಜೆ 4:45ಕ್ಕೆ ಆರಂಭವಾದ ರಥೋತ್ಸವ ಸಂಜೆ 6:30ಕ್ಕೆ ಮೂಲ ಸ್ಥಾನ ತಲುಪಿತು.

Leave a Reply

error: Content is protected !!