LOCAL NEWS : ಸಿ ಸಿ ಕಂಪನಿಯಿಂದ ಹಾಳಾದ ಗ್ರಾಮೀಣ ರಸ್ತೆ ಸುಧಾರಣೆಗಾಗಿ ದಂಡಾಧಿಕಾರಿಗಳಿಗೆ ಮನವಿ..!!
ಶಿರಹಟ್ಟಿ : ಬಾಗಲಕೋಟೆ ಹಾಗೂ ಹೊನ್ನಾಳಿ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣ ಸಮಯದಲ್ಲಿ ಖಾಸಗಿ ಸಿಮೆಂಟ್ ಕಂಪನಿ ವಾಹನ ಓಡಾಟಕ್ಕೆ ಹಾಳಾಗಿರುವ ಗ್ರಾಮೀಣ ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯ ಕುಂದು ಕೊರತೆ ನಿವಾರಣ ಸಮಿತಿ ಸಂಘಟನೆಯವರು ಉಪ ದಂಡಾಧಿಕಾರಿ ಪೂಜಾರ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಅಕ್ಬರ್ ಯಾದಗಿರಿ, “ಪಟ್ಟಣಕ್ಕೆ ಸಂಪರ್ಕಿಸುವ ಸೊರಟೂರು ವರವಿ ಹಾಗೂ ಛಬ್ಬಿ ಗ್ರಾಮದಿಂದ ಬರುವ ಓರ್ಲೋಡ ಟಿಪ್ಪರ್ಓಡಾಡಿ ರಸ್ತೆಯ ಡಾಂಬರ್ ಕಿತ್ತು ಹೋಗಿ ಆರ್ ಸಿ ಸಿ ಕಂಪನಿ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಕೇಳಿಯಬೇಕಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಬಾರ್ ಬಾರ್, ವೀರಣ್ಣ ಅಂಗಡಿ, ಜಗದೀಶ್ ತೇಲಿ, ಶ್ರೀನಿವಾಸ್ ಕಪಟಕರ, ಮಲ್ಲಿಕಾರ್ಜುನ ಕಬಾಡಿ, ಮುನ್ನಾ ಡಾಲಾಯತ್, ಸಂಜೀವ ಹೆಸರು, ಸಿದ್ದಪ್ಪ ವಡ್ಡರ, ಇನ್ನು ಅನೇಕರು ಭಾಗಿಯಾಗಿದ್ದರು.
ವರದಿ: ವೀರೇಶ್ ಗುಗ್ಗರಿ