ಲಕ್ಷ್ಮೇಶ್ವರ ತಾಲೂಕ ಆಡಳಿತ ಸೌಧ ನಿರ್ಮಿಸಲು ಸ್ಥಳ ಪರಿಶೀಲನೆ
ಲಕ್ಷ್ಮೇಶ್ವರ : ರಾಜ್ಯದಲ್ಲಿ ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ (ಲಕ್ಷ್ಮೇಶ್ವರ) ಪ್ರಜಾಸೌಧ ತಾಲೂಕ ಆಡಳಿತ ಕೇಂದ್ರ ಕಟ್ಟಡದ ನಿರ್ಮಿಸುವ ಕುರಿತು ಇಂದು ಶಾಸಕ ಡಾ. ಚಂದ್ರು ಲಮಾಣಿ ಅವರು ಅಧಿಕಾರಿಗಳೊಂದಿಗೆ ಸ್ಥಳವನ್ನು ಪರಿಶೀಲಿಸಿದರು.
ಬೆಳಗಾವಿಯಲ್ಲಿದಿನಾಂಕ 17 ರಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಿಸುವ ಕುರಿತು ಅಧಿವೇಶನದಲ್ಲಿ ಶಾಸಕರು ಮಾತನಾಡಿದ್ದರು.
ಈ ವೇಳೆ ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟ ರವರು, ಜಿ. ಎಸ್. ಗಡ್ಡದೇವರಮಠ ಉಪ ವಿಭಾಗ ಅಧಿಕಾರಿಗಳು ದಂಡಾಧಿಕಾರಿಗಳು ಹಾಗೂ ಲಕ್ಷ್ಮೇಶ್ವರ ಪಟ್ಟಣದ ಮುಖಂಡರು ಉಪಸ್ಥಿತರಿದ್ದರು.