LOCAL NEWS : ಇದೇ ಮೊಟ್ಟ ಮೊದಲ ಬಾರಿಗೆ ಜನವರಿ 14ರಂದು “ಗವಿಶ್ರೀ ಕ್ರೀಡಾ ಉತ್ಸವ”
ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಹೊಂದಿರುವ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಇದೇ ಮೊಟ್ಟ ಮೊದಲ ಬಾರಿಗೆ ಜನವರಿ 14ರಂದು “ಗವಿಶ್ರೀ ಕ್ರೀಡಾ ಉತ್ಸವ” ಆರಂಭವಾಗಲಿದೆ ಎಂದು ಸಂಸದ ರಾಜಶೇಖರ್ ಹಿಟ್ನಾಳ ತಿಳಿಸಿದರು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ” ಕೊಪ್ಪಳ ಜಿಲ್ಲೆಯಲ್ಲಿ ಐತಿಹಾಸಿಕ, ಧಾರ್ಮಿಕ, ಸರ್ವಧರ್ಮೀಯರ ಸೇರಿ ವಿಜ್ರಂಭಿಸುವ ಜಾತ್ರೆಯೆಂದರೆ ಅದು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ, ಬಹಳ ವಿಶೇಷತೆಯಿಂದ ಕೂಡಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ. ಇವೆಲ್ಲದರ ಜೊತೆಗೆ ಈ ವರ್ಷ ಈ ಜಾತ್ರೆಗೆ ಮಗದಷ್ಟು ಸೊಬಗನ್ನು ನೀಡುವಂತಹ ಗವಿಶ್ರೀ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ ಎಂದರು.
ಈ ಗವಿಶ್ರೀ ಕ್ರೀಡಾಕೂಟದಲ್ಲಿ ಬರೋಬ್ಬರಿ 17 ವಿದಧ ರೀತಿಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಪ್ರಮುಖವಾಗಿ ವಾಲಿಬಾಲ್, ಕಬಡ್ಡಿ, ಮ್ಯಾರಥಾನ್, ಸೆಟಲ್ ಬ್ಯಾಟ್ಮಿಟನ್, ಛದ್ಮಾವೇಶ, ದೇಹ ದಾರ್ಡ್ಯಾ ಸ್ಪರ್ಧೆ, ವಿಶೇಷ ಕ್ಷೇತ್ರದಲ್ಲಿ ಇರುವಂತ ಮಹನೀಯರಿಗೆ ಕ್ರಿಕೆಟ್ ಪಂದ್ಯ ಗಾಳಿಪಟ ಮಲಗಂಬ ಕುಸ್ತಿ ಪಂದ್ಯಾವಳಿ, ಹಳ್ಳಿಯ ಸೊಬಗನ್ನ ನೀಡುವಂತ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ, ಮುಂಗೈ ಕುಸ್ತಿ, ಹಾಗೂ ವಿಶೇಷವಾಗಿ ಮಹಿಳೆಯರಿಗೆ ಜಿಲ್ಲಾಮಟ್ಟದ ರಂಗೋಲಿ ತ್ರೋಬಾಲ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
‘ಮಲ್ಲಕಂಬದಲ್ಲಿ ಹೊಳೆಆಲೂರು ಜ್ಞಾನಸಿಂಧು ಅಂಧ ಮಕ್ಕಳ ಶಾಲೆ ಮತ್ತು ಹುಬ್ಬಳ್ಳಿ ಮಲ್ಲಕಂಬ ತಂಡದವರು ಪ್ರದರ್ಶನ ನೀಡಲಿದ್ದಾರೆಕೆಲವು ಸ್ಪರ್ಧೆಗಳು ಇಲ್ಲಿನ ತಾಲ್ಲೂಕು ಕ್ರೀಡಾಂಗಣ ಹಾಗೂ ಗವಿಮಠದ ಆವರಣದಲ್ಲಿ ಜರುಗಲಿವೆ. ಅಗತ್ಯ ವೇಳಾಪಟ್ಟಿ ಮತ್ತು ಸಮಯವನ್ನು ಕೆಲ ದಿನಗಳಲ್ಲಿ ನಿಗದಿ ಮಾಡಲಾಗುವುದು’ ಎಂದು ಹೇಳಿದರು.
ಹಲವು ವರ್ಷಗಳ ಬಳಿಕ ಗಾಳಿಮಠ ಉತ್ಸವ ಆಯೋಜನೆ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಅಧ್ಯಕ್ಷ ಹಾಗೂ ಉದ್ಯಮಿ ಶ್ರೀನಿವಾಸ್ ಗುಪ್ತಾ ಹಾಗೂ ವಿರೇಶ್ ಮಹಾಂತಯ್ಯನಮಠ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎ.ಬಸವರಾಜ, ತಾಲ್ಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ ಇದ್ದರು.