LOCAL NEWS : ಲೋಕ ಕಲ್ಯಾಣಕ್ಕಾಗಿ ಶ್ರೀ ಗಾಯತ್ರಿ ಮತ್ತು ಲಕ್ಷ ಮೋದಕ ಶ್ರೀ ಗಣಪತಿ ಹೋಮ
ಕೊಪ್ಪಳ : ನಗರದಲ್ಲಿ ಲೋಕ ಕಲ್ಯಾಣಕ್ಕಾಗಿ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಇದೆ ಡಿಸೆಂಬರ್ 27,28 ಮತ್ತು 29 ರಂದು ಮೂರುದಿನಗಳ ಕಾಲ ಶ್ರೀಗಾಯತ್ರಿ ಮತ್ತು ಲಕ್ಷ ಮೋದಕ ಶ್ರೀ ಗಣಪತಿ ಹೋಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಶ್ರೀ ವೇದ ಮಾತಾ ಗಾಯಿತ್ರಿ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದು ಕಾರ್ಯಕ್ರಮದ ಸಾನಿಧ್ಯವನ್ನು ಹೊಸಪೇಟೆ ಚಿಂತಾಮಣಿಮಠ ಅಮರಾವತಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು, ಶ್ರೀ ಸದ್ಗುರು ಭೀಮಾಶಂಕರ ಮಠ ಪೀಠಾಧೀಶರಾದ ಶ್ರೀ ಸದ್ಗುರು ದತ್ತಪ್ಪಯ್ಯ ಮಹಾಸ್ವಾಮಿಗಳು, ಕರ್ಕಿಹಳ್ಳಿಯ ಶ್ರೀ ಸುರೇಶ ಪಾಟೀಲ್ ಮಹಾರಾಜರು ಗುರುಗಳು ಸಾನಿದ್ಯ ವಹಿಸಲಿದ್ದಾರೆ.
ಡಿ,27 ಶುಕ್ರವಾರ ಸ್ವಸ್ತಿಶ್ರೀ ಶ್ರೀಮನೃಪ ಶಾಲಿವಾಹನ ಶಕೆ 1946ನೇ ಕ್ರೋಧಿನಾಮ ,ಸಂವತ್ಸರದ ದಕ್ಷಿಣಾಯಣ ಮಾರ್ಗಶಿರ್ಷ ಮಾಸ ಕೃಷ್ಣಪಕ್ಷ ದ್ವಾದಶಿಯಂದು ಸಂಜೆ: 6.00 ಗಂಟೆಗೆ ಗೋಮಾತೆಯ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಂಜೆ: 6.30 ಕ್ಕೆ &quoಣ;ಉದಕ ಶಾಂತಿ&quoಣ;, ರಾತ್ರಿ: 8.30 ಕ್ಕೆ ಪ್ರಸಾದ ಜರುಗಲಿದೆ. ಡಿ, 28 ಶನಿವಾರದ ಸ್ವಸ್ತಿಶ್ರೀ ಶ್ರೀಮನೃಪ ಶಾಲಿವಾಹನ ಶಕೆ 1946ನೇ ಕ್ರೋಧಿನಾಮ ಸಂವತ್ಸರದ ದಕ್ಷಿಣಾಯಣ ಮಾರ್ಗಶಿರ್ಷ ಮಾಸ ಕೃಷ್ಣಪಕ್ಷ ತ್ರಯೋದಶಿ ಬೆಳಿಗ್ಗೆ : 8.00 ಗಂಟೆಗೆ ಪುಣ್ಯಾಹವಾಚನ ಮತ್ತು ದೇವತಾ ಸ್ಥಾಪನೆ ಶ್ರೀ ಗಾಯತ್ರಿ ಹೋಮ ಮತ್ತು ಗಣಪತಿ ಹೋಮ ಮಧ್ಯಾಹ್ನ: 12.30 ಕ್ಕೆ ಶ್ರೀ ಗಾಯತ್ರಿ ಹೋಮದ “ಪೂರ್ಣಾಹುತಿ&quoಣ; ಮಧ್ಯಾಹ್ನ: 1.30 ಕ್ಕೆ ಮಂಗಳಾರತಿ ಮತ್ತು ತೀರ್ಥಪ್ರಸಾದ ಜರುಗಲಿದೆ.
ಧಾರ್ಮಿಕ ಸಭೆ” :ಸಂಜೆ: 6.30 ಧಾರ್ಮಿಕ ಸಭೆ ಜರುಗಲಿದ್ದು ಕೊಪ್ಪಳದ ರಾಮಕೃಷ್ಣ ಆಶ್ರಮ ಶ್ರೀ ಚೈತನ್ಯಾನಂದ ಸ್ವಾಮೀಜಿ ಹಾಗೂ ಭಾಗ್ಯನಗರದ ಶಂಕರಮಠದ ಶ್ರೀ ಶಿವಪ್ರಕಾಶಾನಂದ ಸ್ವಾಮೀಜಿ , ಇಳಕಲ್ ಕುರ್ತಕೋಟಿ ಶ್ರೀಪಾದಶಾಸ್ತ್ರಿ , ಧಾರವಾಡ ಡಾ. ವಿ.ಕೆ. ಹಂಪಿಹೊಳಿ ಡಾ. ಬೆಳವಾಡಿ ಹರೀಶ್ ಭಟ್ ಸಾನಿಧ್ಯವಹಿಸಿ ಮಾತನಾಡಲಿದ್ದಾರೆ.
ಡಿ 29 ರವಿವಾರ ಸ್ವಸ್ತಿಶ್ರೀ ಶ್ರೀಮನೃಪ ಶಾಲಿವಾಹನ ಶಕೆ 1946ನೇ ಕ್ರೋಧಿನಾಮ ಸಂವತ್ಸರದ ದಕ್ಷಿಣಾಯಣ ಮಾರ್ಗಶಿರ್ಷ ಮಾಸ ಕೃಷ್ಣಪಕ್ಷ ಚತುರ್ದಶಿಯಂದು ಬೆಳಿಗ್ಗೆ : 6.30 ಗಂಟೆಗೆ ದೇವತಾಪೂಜೆ ಬೆಳಿಗ್ಗೆ : 10.00 ಗಂಟೆಗೆ ಲಕ್ಷಮೋದಕ ಗಣಪತಿ ಹೋಮದ “ಪೂರ್ಣಾಹುತಿ; ಬೆಳಿಗ್ಗೆ: 11.00 ಕ್ಕೆ ಶ್ರೀಗಳಿಂದ “ಆಶೀರ್ವಚನ; ಮಧ್ಯಾಹ್ನ: 1.30 ಕ್ಕೆ ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ಜರುಗಲಿದ್ದು, ಭಕ್ತಾದಿಗಳು ಆಗಮಿಸಿ ಆಗಮಿಸಿ ಯಶಸ್ವಿ ಗೋಳಿಸುವಂತೆ ಕೋರಿದ್ದಾರೆ.