LOCAL NEWS : ಸಮಾಜ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಸೃಜನಾತ್ಮಕ ಕಲಿಕೆಗೆ ಸಹಾಯಕ : ಶ್ರೀನಿವಾಸ ಗುಪ್ತಾ

You are currently viewing LOCAL NEWS : ಸಮಾಜ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಸೃಜನಾತ್ಮಕ ಕಲಿಕೆಗೆ ಸಹಾಯಕ : ಶ್ರೀನಿವಾಸ ಗುಪ್ತಾ

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಸಮಾಜ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಸೃಜನಾತ್ಮಕ ಕಲಿಕೆಗೆ ಸಹಾಯಕ : ಶ್ರೀನಿವಾಸ ಗುಪ್ತಾ

ಕೊಪ್ಪಳ : ಸಮಾಜ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾದರಿ ನಿರ್ಮಾಣ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ಬೆಳೆೆಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ ಎಂದು ಖ್ಯಾತ ಉದ್ಯಮಿಗಳಾದ ಹಾಗೂ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ ಹೇಳಿದರು.

ಅವರು ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆಯಲ್ಲಿ 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಸಮಾಜ ವಿಜ್ಞಾನ ವಿಷಯದ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ನೇರವೆರಿಸಿದ ಅವರು ವಸ್ತು ಪ್ರದರ್ಶನಗಳು ಮಕ್ಕಳಲ್ಲಿವಿಭಿನ್ನಾತ್ಮಕ ಆಲೋಚನೆ ಮತ್ತು ಚಿಂತನೆಯನ್ನು ಬೆಳೆಸುವುದರ ಮೂಲಕ ಮಕ್ಕಳ ಅನುಭವಪೂರಿತವಾದ ಕಲಿಕೆಗೆ ಸಹಾಯಕಾರಿ ಆಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಶಾಲೆಯ ಆಡಳಿತಾಧಿಕಾರಿಗಳಾದ ಗವಿಸಿದ್ಧಪ್ಪ.ವಿ.ಕೊಪ್ಪಳ ಮಾತನಾಡಿ ಮಕ್ಕಳ ಕಲಿಕೆಯಲ್ಲಿ ಪಠ್ಯ ವಿಷಯದ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳನ್ನು ಸದಾ ಕ್ರೀಯಾಶಿಲರನ್ನಾಗಿ ಮಾಡುತ್ತವೆ ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ವಸ್ತು ಪ್ರದರ್ಶನದಲ್ಲಿ ಇತಿಹಾಸದ ಘಟನೆಗಳನ್ನು ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಗಳ ವಿವರಣೆಯನ್ನು ಅತಿಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ನೀಡಿದರು. ಅತಿಥಿ ಸ್ಥಾನವನ್ನು ಚನ್ನಬಸಪ್ಪ ಹೊಳೆಯಪ್ಪನವರ ಹಾಗೂ ಲಲಿತ್ ಜೈನ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಗುರುಗಳಾದ ಅಮರೇಶ.ಎ. ಕರಡಿಯವರು ವಹಿಸಿದ್ದರು.

ವಿದ್ಯಾರ್ಥಿ ಕೆ.ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಶಿಕ್ಷಕರಾದ ದೇವಪ್ಪ.ಜಿ ವೇದಿಕೆ ಮೇಲಿರುವ ಗಣ್ಯರಿಗೆ ಸ್ವಾಗತಿಸಿದರು. ಹಾಗೂ ಹೆಚ್.ಎಂ.ವಂದಾಲಿ ಶಿಕ್ಷಕರು ಅತಿಥಿಗಳ ಪರಿಚಯ ನೀಡಿದರು. ರವಿ ಎನ್.ರಂಜಣಗಿ ಶಿಕ್ಷಕರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಹೆಚ್.ಎಂ.ಗಾಳಿಯವರು ವಂದಿಸಿದರು ಹಾಗೂ ಗವಿಸಿದ್ಧಪ್ಪ ಹತ್ತಿ ಶಿಕ್ಷಕರು ಕಾರ್ಯಕ್ರಮದ ನಿರೂಪಿಸಿದರು.

Leave a Reply

error: Content is protected !!