LOCAL NEWS : ಕ್ಲರ್ಕ ಕಂ ಡಾಟಾ ಎಂಟ್ರಿ ಅಪರೇಟರ್ ಗ್ರಾಮ ಪಂಚಯತಿಯ ಆಧಾರ ಸ್ತಂಭವಿದ್ದಂತೆ : ಸಂತೋಷ ಬಿರಾದರ್ ಪಾಟೀಲ್

You are currently viewing LOCAL NEWS : ಕ್ಲರ್ಕ ಕಂ ಡಾಟಾ ಎಂಟ್ರಿ ಅಪರೇಟರ್ ಗ್ರಾಮ ಪಂಚಯತಿಯ ಆಧಾರ ಸ್ತಂಭವಿದ್ದಂತೆ : ಸಂತೋಷ ಬಿರಾದರ್ ಪಾಟೀಲ್

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಕ್ಲರ್ಕ ಕಂ ಡಾಟಾ ಎಂಟ್ರಿ ಅಪರೇಟರ್ ಗ್ರಾಮ ಪಂಚಯತಿಯ ಆಧಾರ ಸ್ತಂಭವಿದ್ದಂತೆ : ಸಂತೋಷ ಬಿರಾದರ್ ಪಾಟೀಲ್

ಕುಕನೂರ : ‘ಗ್ರಾಮ ಪಂಚಾಯತಿ ಕ್ಲರ್ಕ ಕಂ. ಡಾಟಾ ಎಂಟ್ರಿ ಅಪರೇಟರ್ ಗ್ರಾಮ ಪಂಚಾಯತಿಯ ಆಧಾರ ಸ್ತಂಭವಿದ್ದಂತೆ, ಸರ್ಕಾರದ ಯೋಜನೆಗಳಾದ ಮಹಾತ್ಮಗಾಂಧಿ ನರೇಗಾ ಯೋಜನೆ, ಸ್ವಚ್ಚ ಭಾರತ ಮಿಷನ್, ವಸತಿ ಯೋಜನೆ, ಪಂಚತಂತ್ರ 2.0, ಸಕಾಲ, ಸೇರಿದಂತೆ ಬಾಪೂಜಿ ಸೇವಾ ಕೇಂದ್ರದ ಮೂಲಕ ನೂರಾರು ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಗ್ರಾಮ ಪಂಚಾಯತಿಯ ಆಪರೇಟರ್‌ ಪಾತ್ರ ಮಹತ್ವದ್ದಾಗಿದೆ’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್ ಹೇಳಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಕನೂರ ತಾಲೂಕ ಪಂಚಾಯತಿಯಿಂದ “ಕಂಪ್ಯೂಟರ್ ಅಪರೇಟರ್ ದಿನಾಚರಣೆ”ಯನ್ನು ಹಮ್ಮಕೊಳ್ಳಲಾಗಿತ್ತು, ಈ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನದ ಮಾಹಿತಿ ಸಾರ್ವಜನಿಕರಿಗೆ ಅಥವಾ ಸರ್ಕಾರಕ್ಕೆ ಸಲ್ಲಿಸಲು ಇವರ ಪಾತ್ರ ಮಹತ್ವದ್ದಾಗಿದೆ. ಅದರಂತೆ ಕಂಪ್ಯೂಟರ್ ಅಪರೇಟರ್ ರವರು ಅದೇ ಗ್ರಾಮ ಪಂಚಾಯತಿಯಲ್ಲಿ ಹಲವಾರು ವರ್ಷಗಳಿಂದ ಇರುವುದರಿಂದ ಸ್ಥಳೀಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಜನ ಸಾಮಾನ್ಯರಿಗೆ ಉತ್ತಮ ಸೇವೆ ಮಾಡಲು ಇವರಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಅದರಂತೆ ಕಂಪ್ಯೂಟರ್ ಅಪರೇಟರ್ ಸಹ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾಗುತ್ತದೆ. ಅವರು ಪ್ರತಿನಿತ್ಯ ವ್ಯಾಯಾಮವನ್ನು ಮಾಡಬೇಕು, ಆರೋಗ್ಯ ಇದ್ದರೆ ಮಾತ್ರ ನಾವು ಸರ್ಕಾರದ ಸೇವೆ ಮಾಡಬಹುದು, ಅದಕ್ಕಾಗಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪ್ರಧಾನ ಮಂತ್ರಿ ಸುರಕ್ಷ್ಯಾ ಭಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಸುರಕ್ಷ್ಯಾ ಭಿಮಾ ಯೋಜನೆಯಂತಹ ಇನ್ಸೈರನ್ಸ ಯೊಜನೆಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು, ಅಟಲ್ ಪೆನ್ ಷನ್, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಂತಹ ನಿವೃತ್ತಿ ಜೀವನಕ್ಕಾಗಿ ಯೋಜನೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

 

ಇದೇ ವೇಳೆಯಲ್ಲಿ ತಾಲೂಕಿನ 15 ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಅಪರೇಟರ್ ರವರಿಗೆ ಸನ್ಮಾನ ಮಾಡಲಾಯಿತು.

ಇದೇ ವೇಳೆಯಲ್ಲಿ ತಾಲೂಕಿನ 15 ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಅಪರೇಟರ್ ರವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್‌ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ತಾಂತ್ರಿಕ, ಎಮ್.ಐ.ಎಸ್, ಐ.ಇ.ಸಿ ಸಂಯೋಜಕರು, ತಾಪಂ ಸಿಬ್ಬಂದಿಗಳು, ರಾಜೀವ್ ಗಾಂಧಿ ಪೇಲೋ ಸಿಬ್ಬಂದಿಯವರು, ಎಲ್ಲಾ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಅಪರೇಟರ್ಸ್ ಹಾಜರಿದ್ದರು.

Leave a Reply

error: Content is protected !!