BIG NEWS : ನಿನ್ನೆ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟ…! : ಈ ಅಂಕಿಅಂಶ ನೋಡಿದ್ರೆ ಅಚ್ಚರಿ ಪಡುತ್ತೀರಾ,…!!
ಬೆಂಗಳೂರು : ರಾಜ್ಯದಲ್ಲಿ ನಿನ್ನೆ (ಶನಿವಾರ) ದಾಖಲೆಯ ಮದ್ಯ ಮಾರಾಟವಾಗಿದ್ದು, ಬರೋಬ್ಬರಿ 408.53 ಕೋಟಿ ಮೌಲ್ಯದ ಮದ್ಯ ಮತ್ತು ಬಿಯರ್ ಮಾರಾಟವಾಗಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ವಿವರಗಳನ್ನು ನೀಡಿದ ಅವರು, ದೈನಂದಿನ ಮದ್ಯ ಮಾರಾಟವು ಸಾಮಾನ್ಯವಾಗಿ ಸರಾಸರಿ 100 ಕೋಟಿ ರೂ. ಆಗಿರುತ್ತದೆ. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಡಿಸೆಂಬರ್ 27ರಂದು ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿತ್ತು, ಜೊತೆಗೆ 7 ದಿನಗಳ ಶೋಕಾಚಾರಣೆ ಆಚರಣೆ ಮಾಡಬೇಕು ಎಂದು ತಿಳಿಸಿತ್ತು. 27 ರಂದು ಮದ್ಯ ಖರೀದಿ ಸಾಧ್ಯವಾಗಿರಲಿಲ್ಲ ಎಂದರು.
ಹಾಗಾಗಿ ದಾಖಲೆಯ ಮಾರಾಟದಲ್ಲಿ 6,22,062 ಕೇಸ್ ವಿಸ್ಕಿ ಮತ್ತು ಇತರ ಸ್ಪಿರಿಟ್ ಗಳು, 4,04,998 ಕೇಸ್ ಬಿಯರ್ ಸೇರಿದಂತೆ ಒಟ್ಟು 10,27,060 ಕೇಸ್ ಗಳು ಸೇರಿವೆ.
ವಿಸ್ಕಿ ಮತ್ತು ಸ್ಪಿರಿಟ್ಸ್ 327.50 ಕೋಟಿ ರೂ., ಬಿಯರ್ ಮಾರಾಟ 80.58 ಕೋಟಿ ರೂ. ಇದೀಗ ರಾಜ್ಯದಲ್ಲಿ ಅಭೂತಪೂರ್ವ ಒಂದು ದಿನದ ಮಾರಾಟದ ದಾಖಲೆ ಬರೆದಿದೆ.