LOCAL BREAKING : ಅಹೋರಾತ್ರಿ ಧರಣಿ ಕುಳಿತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು…!!

You are currently viewing LOCAL BREAKING : ಅಹೋರಾತ್ರಿ ಧರಣಿ ಕುಳಿತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು…!!

ಪ್ರಜಾವೀಕ್ಷಣೆ ಸುದ್ದಿ :-

LOCAL BREAKING : ಅಹೋರಾತ್ರಿ ಧರಣಿ ಕುಳಿತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು…!

ಕುಕನೂರು : ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶದ ಪ್ರಕಟಣೆ ಮಾಡಿರುವದರ ವಿರುದ್ಧ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕೆಲ ರೈತರು ಅಹೋರಾತ್ರಿ ಧರಣಿ ಕುಳಿತರು.

ನಿನ್ನೆ ನಡೆದ ಚುನಾವಣೆಯ ಕುರಿತು ಫಲಿತಾಂಶ ಘೋಷಣೆಯಾಗಬೇಕಿತ್ತು. ಆದರೆ ಮೂಲ ಮತದಾರರು ಮತ ಚಲಾವಣೆ ಮಾಡಿದ ಮತ ಪೆಟ್ಟಿಗೆ ಹಾಗೂ ಅನರ್ಹರು ಕೋರ್ಟು ಮೂಲಕ ತಂದ ಪಟ್ಟಿಯ ಮತದಾನದ ಮತ ಪೆಟ್ಟಿಗೆ ಪ್ರತ್ಯೇಕವಾಗಿದ್ದರಿಂದ ಮತ ಎಣಿಕೆ ಮಾಡುವಲ್ಲಿ ಗೊಂದಲ ಉಂಟಾಯಿತು.

ಈ ವೇಳೆ ಬಿಜೆಪಿ-ಕಾಂಗ್ರೆಸ್ ಪಕ್ಷ ಬೆಂಬಲಿತರಿಂದ ವಾದ ಪ್ರತಿವಾದ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಭದ್ರ ಪಡಿಸಿದ ಮತ ಪೆಟ್ಟಿಗೆಗಳನ್ನು ಪಟ್ಟಣದ ಎಪಿಎಂಸಿ ಆವರಣದ ಆ‌ರ್.ಡಿ.ಸಿ ಬ್ಯಾಂಕ್ ನ ಲಾಕರ್ ನಲ್ಲಿ ಭದ್ರ ಪಡಿಸಿದರು.

ಆದರೆ ಇದಕ್ಕೆ ಒಪ್ಪದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಎಪಿಎಂಸಿ ಆವರಣದಲ್ಲಿ ಪಕ್ಷದ ಧ್ವಜ ಹಿಡಿದು ಪೊಲೀಸರ ವಿರುದ್ಧ ಹಾಗೂ ಚುನಾವಣೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ವೇಳೆಯಲ್ಲಿ ಬಿಜೆಪಿ ನಾಯಕ ಹಾಗೂ ಆ‌ರ್.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ಬಸವರಾಜ್ ಅವರು ಮಾತನಾಡಿ, ಯಾರೋ ಪ್ರಭಾವಿಗಳ ಮಾತು ಕೇಳಿ ಚುನಾವಣಾಧಿಕಾರಿ ಈ ರೀತಿ ಕಾನೂನು ಬಾಹೀರಾವಾದ ಚಟುವಟಿಕೆ ಮಾಡಿದ್ದಾರೆ.

ಚುನಾವಣೆ ಕಾನೂನು ಪ್ರಕಾರ 4ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಬಳಿಕ ಅವರು ಒಂದು ಬೂತ್ ನ ಫಲಿತಾಂಶವನ್ನು ಘೋಷಣೆ ಮಾಡುವ ಅವಕಾಶ ಇತ್ತು. ಆದರೆ, ಅವರು ಫಲಿತಾಂಶ ಘೋಷಣೆ ಮಾಡಲಿಲ್ಲ. ಕೋರ್ಟ್ ಅದೇಶದ ಪ್ರಕಾರ, ಚುನಾವಣೆ ಅಧಿಕಾರಿ ಫಲಿತಾಂಶ ಘೋಷಣೆ ವಿಚಾರದಲ್ಲಿ ಸರ್ವ ಸ್ವತಂತ್ರರಾಗಿದ್ದು, ಅದನ್ನು ಅರಿಯದ ಅಧಿಕಾರಿ, ತಮ್ಮ ಈ ನಡೆಯಿಂದ ನಮ್ಮ ರೈತಾಪಿ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅತೀವ ಬೇಸರ ಪಡೆಸಿದ್ದಾರೆ. ಈ ಹೋರಾಟ ಜಿಲ್ಲಾ ಮಟ್ಟದಲ್ಲಿಯೂ ತೀವ್ರವಾಗಲಿದೆ ಎಂದು ತಿಳಿಸಿದರು.

ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಗವರಾಳ್ ಹಾಗೂ ಬಿಜೆಪಿಯ ಪ್ರಮುಖ ಸ್ಥಳೀಯ ನಾಯಕರು ಇದ್ದರು.

Leave a Reply

error: Content is protected !!