ಪ್ರಜಾವೀಕ್ಷಣೆ ಸುದ್ದಿ :-
LOCAL NEWS : ಚುನಾವಣೆಯ ಫಲಿತಾಂಶ ತಡೆ : ಬಿಜೆಪಿ ಬೃಹತ್ ಪ್ರತಿಭಟನೆ ಮಾಜಿ ಸಚಿವ ಹಾಲಪ್ಪ ಆಚಾರ್ ಭಾಗಿ..!!
ಕುಕನೂರು : ಕುಕನೂರ ಪಟ್ಟಣದಲ್ಲಿ ನಿನ್ನೆ (ಡಿ.29 ರಂದು) ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಚುನಾವಣಾ ಆಡಳಿತ ಅಧಿಕಾರಿಗಳ ವಿರುದ್ಧ ಕುಕನೂರಿನ ಎ. ಪಿ. ಎಮ್. ಸಿ. ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಗವರಾಳ್ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಶಕ್ತಿ ಕೇಂದ್ರ ಪ್ರಮುಖರು, ಎಲ್ಲಾ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬೂತ್ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು, ಭಾಗವಹಿಸಲು ವಿನಂತಿ ಮಾಡಿದ್ದಾರೆ.