Local News : ರಾಜಕೀಯ ತಿರುವು ಪಡೆದುಕೊಂಡ ಕೃಷಿ ಪತ್ತಿನ ಸಂಘದ ಚುನಾವಣಾ ಫಲಿತಾಂಶ …!!

You are currently viewing Local News : ರಾಜಕೀಯ ತಿರುವು ಪಡೆದುಕೊಂಡ ಕೃಷಿ ಪತ್ತಿನ ಸಂಘದ ಚುನಾವಣಾ ಫಲಿತಾಂಶ …!!

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS :  ರಾಜಕೀಯ ತಿರುವು ಪಡೆದುಕೊಂಡು ಕೃಷಿ ಪತ್ತಿನ ಸಂಘದ ಚುನಾವಣಾ ಫಲಿತಾಂಶ …!

ಕುಕನೂರು : ಪಟ್ಟಣದಲ್ಲಿ ನಿನ್ನೆ ನೆಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಕಾವು ಜೋರಾಗಿಯೇ ಇದೆ.

ಚುನಾವಣೆ ಮುಗಿದು ಫಲಿತಾಂಶದ ಹೊತ್ತಿಗೆ ಅದು ರಾಜಕೀಯ ತಿರುವು ಪಡೆದುಕೊಂಡಿದ್ದು, ಫಲಿತಾಂಶ ಘೋಷಿಸುವಂತೆ ಹಾಗೂ ಫಲಿತಾಂಶ ಘೋಷಣೆ ಮಾಡದಂತೆ ಕೆಲ ಅಭ್ಯರ್ಥಿಗಳು ಹಾಗೂ ಪಕ್ಷ ಬೆಂಬಲಿತ ಕಾರ್ಯಕರ್ತರು ತಕರಾರು ನೆಡೆಸಿದ್ದರು.

ಈ ಹಿನ್ನಲೆ ಮತ ಪಟ್ಟಿಗೆಗಳನ್ನು ಪಟ್ಟಣದ ಎಪಿಎಮ್‌ಸಿ ಆವರಣದಲ್ಲಿರುವ ಆರ್.ಡಿ.ಸಿ ಬ್ಯಾಂಕ್‌ನ ಸ್ಟಾçಂಗ್ ರೂಮ್ ನಲ್ಲಿ ಇರಿಸಲಾಗಿತ್ತು. ಆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮತ ಏಣಿಕೆ ಮಾಡುವಂತೆ ನಿನ್ನೆ ರಾತ್ರಿಯಿಂದ ಪ್ರತಿಭಟನೆಯನ್ನು ನೆಡೆಸುತ್ತಿದ್ದಾರೆ.


ಇಂದು ಬೆಳ್ಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವರಾದ ಹಾಲಪ್ಪ ಆಚಾರ್ ಭೇಟಿ ನೀಡಿ ಮಾತನಾಡಿದ ಅವರು ನೇರವಾಗಿ ಶಾಸಕ ಬಸವರಾಜ ರಾಯರೆಡ್ಡಿಗೆ ಮಾತಿನ ಚಾಟಿ ಬಿಸಿ ಮಾತನಾಡಿದ ಅವರು “ಸಹಕಾರಿ ರಂಗದ ಗಂಧ ಗಾಳಿ ಗೊತ್ತಿಲ್ಲದಂತಹ ಈ ಒಬ್ಬ ದಡ್ಡ ಶಿಖಾಮಣಿ ಶಾಸಕ ರಾಯರೆಡ್ಡಿ ರಾಜಕೀಯ ಕುತಂತ್ರ ಮಾಡಿ ಇವತ್ತು ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿದ್ದಾರೆ”
ಹಾಲಿ ಶಾಸಕರು ಎರಡು ವರ್ಷದ ಆಡಳಿತದಲ್ಲಿ ತಾವು ಮಾಡಿದಂತಹ ಸಾಧನೆಗಳು ಎಲ್ಲಿದೆ ? ನಿಮಗೆ ಸುಧಾರಣೆ ಮಾಡಬೇಕೆನ್ನುವ ಅಂತ ಕ್ಷೇತ್ರಗಳು ಬಹಳಷ್ಟು ಇರುವಾಗ ನೀವ್ ಯಾಕೆ ಸಹಕಾರಿ ಸಂಘದಲ್ಲಿ ನೇರವಾಗಿ ರಾಜಕೀಯ ಮಾಡಿದ್ರಿ. ನಿಮ್ಮ ಬೆಂಬಲಿಗರನ್ನು ಬೆಳೆಸಲಿಕ್ಕೆ ಇವತ್ತು ನಿಜವಾದ ರೈತರನ್ನ ಈ ಚುನಾವಣೆಯ ಹೆಸರಿನಲ್ಲಿ ಅಕ್ರಮ ಎಸಗಿ ರೈತರನ್ನು ಬಲಿಪಶು ಮಾಡುತ್ತಿದ್ದರೀ, ಸತತವಾಗಿ ನಿನ್ನೆ ಬೆಳಗ್ಗೆಯಿಂದ ಇವತ್ತಿನ ಮಧ್ಯಾಹ್ನದವರೆಗೂ ತಾಲೂಕಿನ ರೈತರಿಗೆ ಹಾಗೂ ಸಹಕಾರ ರಂಗದ ಸದಸ್ಯರಿಗೆ ನೀವು ಕೊಟ್ಟಂತ ನೋವು ಹಿಂಸೆಗೆ ಮುಂದೆ ನಿಮಗೆ ಜನ ಪಾಠ ಕಲಿಸಿ ಕಲಿಸುತ್ತಾರೆ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಸ್ಥಳಕ್ಕೆ ಸಂಬAದಪಟ್ಟ ಅಧಿಕಾರಿಗಳು ಬಂದು ಫಲಿತಾಂಶವನ್ನು ಘೋಷಣೆಯನ್ನು ಮಾಡಬೇಕು, ಇಲ್ಲವಾದರೆ ಮುಂದಿನ ಹೋರಾಟದ ಸ್ವರೂಪ ತೀವ್ರ ಗತಿಯಲ್ಲಿ ಇರಲಿದೆ. ಇದು ನಿಮಗೆ ಎಚ್ಚರಿಕೆಯ ಗಂಟೆ ಎಂದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಹಾಗೂ ಜಿಲ್ಲೆಯ ವಿವಿಧ ಬಿಜೆಪಿ ಮುಖಂಡರು, ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಗುಳಗಣ್ಣನವರ, ಆರ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು, ಮಾರುತಿ ಗಾವರಾಳ ಹಾಗೂ ಬಿಜೆಪಿಯ ಕಾರ್ಯಕರ್ತರು ಇದ್ದರು.

 

Leave a Reply

error: Content is protected !!