LOCAL NEWS : ಮಾಜಿ ಸಚಿವರು, ಹಾಲಿ ಶಾಸಕರ ಬಗ್ಗೆ ಮಾಡಿರುವ ಆಪಾದನೆ ಸರಿಯಾದ ಕ್ರಮವಲ್ಲ: ವೈ ಹೆಚ್‌ ಕಟ್ಟಿಮನಿ

You are currently viewing LOCAL NEWS : ಮಾಜಿ ಸಚಿವರು, ಹಾಲಿ ಶಾಸಕರ ಬಗ್ಗೆ ಮಾಡಿರುವ ಆಪಾದನೆ ಸರಿಯಾದ ಕ್ರಮವಲ್ಲ: ವೈ ಹೆಚ್‌ ಕಟ್ಟಿಮನಿ

LOCAL NEWS : ಮಾಜಿ ಸಚಿವರು, ಹಾಲಿ ಶಾಸಕರ ಬಗ್ಗೆ ಮಾಡಿರುವ ಆಪಾದನೆ ಸರಿಯಾದ ಕ್ರಮವಲ್ಲ: ವೈ ಹೆಚ್‌ ಕಟ್ಟಿಮನಿ

ಕುಕನೂರು : “ಬಿಜೆಪಿ ಆಂಡ್‌ ಟೀಂ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಶಾಸಕ ಬಸವರಾಜ ರಾಯರೆಡ್ಡಿಯವರ ಕುರಿತು ಆಪಾದನೆ ಸರಿಯಾದ ಕ್ರಮವಲ್ಲ, ತಾಲೂಕಿನಲ್ಲಿ ನಡೆಯುತ್ತೀರುವ ಅಭಿವೃಧ್ಧಿಯನ್ನು ಸಹಿಸಲಾಗದೆ ಈ ರೀತಿ ಸುಳ್ಳು ಆರೋಪ ಮಾಡುತ್ತೀದ್ದಾರೆ” ಎಂದು ಕಾಂಗ್ರೆಸ್‌ ತಾಲೂಕ ವಕ್ತಾರ ಯಮನೂರಪ್ಪ ಕಟ್ಟಿಮನಿ ಅವರು ತಿರುಗೇಟು ನೀಡಿದರು.

ಈ ಹಿಂದೆ ನಡೆದ ಡಿ. 30 ರಂದು ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶ ಘೋಷಣೆ ಆಗದ ಕುರಿತು ಪ್ರತಿಭಟನೆ ಮಾಡುವ ವೇಳೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರ ಕುರಿತು ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದ್ದರು.

ಈ ವಿಚಾರವಾಗಿ ಕಾಂಗ್ರೆಸ್‌ನ ತಾಲೂಕಾ ವಕ್ತಾರ ವೈ ಹೆಚ್‌ ಕಟ್ಟಿಮನಿ, ಪ್ರಜಾವೀಕ್ಷಣೆಗೆ ಪ್ರತಿಕ್ರಿಯೆ ನೀಡಿದ್ದು, “ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ ಹಾಗೂ ಶಾಸಕ ರಾಯರೆಡ್ಡಿಯವರಿಗೆ ಸಹಕಾರಿ ರಂಗದ ಗಾಳಿಗಂಧ ಗೊತ್ತೀಲ್ಲದಿದ್ದರೆ, ತಾಲೂಕಿನಲ್ಲಿ ಸಹಕಾರಿ ರಂಗದ ಬ್ಯಾಂಕಗಳೆ ಇರುತ್ತೀರಲಿಲ್ಲ” ಎಂದು ಹೇಳಿದರು.

Leave a Reply

error: Content is protected !!