ಪ್ರಜಾವೀಕ್ಷಣೆ ಸುದ್ದಿ :-
LOCAL NEWS : ಫಿಕಾರ್ಡ ಬ್ಯಾಂಕ್‌ನ 5ನೇ ಬಾರಿಗೆ ಅಧ್ಯಕ್ಷರಾಗಿ ಚಂದ್ರಶೇಖರಯ್ಯ ಹಿರೇಮಠ ಆಯ್ಕೆ..!!
ಕುಕನೂರು-ಯಲಬುರ್ಗಾ120 : ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ (ಫಿಕಾರ್ಡ) ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ 5ನೇ ಬಾರಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಚಂದ್ರಶೇಖರಯ್ಯ ಹಿರೇಮಠ (ಭಾನಾಪೂರ) ಹಾಗೂ ಉಪಾಧ್ಯಕ್ಷರಾಗಿ ಭೀಮರೆಡ್ಡಿ ಚಿಕೇನಕೊಪ್ಪ ಅವರು ಆಯ್ಕೆಯಾದರು.
ಇಂದು ಯಲಬುರ್ಗಾ ಪಟ್ಟಣದಲ್ಲಿರುವ ತಾಲೂಕು ಫಿಕಾರ್ಡ ಬ್ಯಾಂಕ್‌ಗೆ 5ನೇ ಬಾರಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಚಂದ್ರಶೇಖರಯ್ಯ ಹಿರೇಮಠ (ಭಾನಾಪೂರ), ಉಪಾಧ್ಯಕ್ಷರಾಗಿ ಭೀಮರೆಡ್ಡಿ ಚಿಕೇನಕೊಪ್ಪ ಆಯ್ಕೆಯಾಗಿದ್ದಾರೆ. ತಾಲೂಕಾ ಕಾಂಗ್ರೆಸ್ ಮುಖಂಡರಾದ ಮೇಘರಾಜ್ ನಾಯ್ಕ್ , ಪ್ರಭಯ್ಯ ಕೆಂಭಾವಿ, ವೀರುಪಾಕ್ಷಯ್ಯ ಕುರ್ತುಕೋಟಿ ಅವರು ಚಂದ್ರಶೇಖರಯ್ಯ ಹಿರೇಮಠ ಮತ್ತು ಭೀಮರೆಡ್ಡಿ ಚಿಕೇನಕೊಪ್ಪಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.