LOCAL NEWS : ಬಿಜೆಪಿ ಮುಖಂಡ ಈರಣ್ಣ ಹುಬ್ಬಳ್ಳಿ ವಿರುದ್ದ ದೂರು ನೀಡಿದ ಕಾಂಗ್ರೆಸ್ ಕಾರ್ಯಕರ್ತರು…!!
ಕುಕನೂರು : ಕಳೆದ ಡಿಸೆಂಬರ್ 30 ರಂದು ಕುಕನೂರಿನ ಎ.ಪಿ.ಎಮ್.ಸಿ ಆವರಣದಲ್ಲಿರುವ ಅರ್ ಡಿ ಸಿ ಸಿ ಬ್ಯಾಂಕ್ ಎದುರುಗಡೆ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಅವಾಚ್ಯ ಶಬ್ದಗಳಿಂದ ಅವಹೇಳನಕಾರಿಯಾಗಿ ಎಂದು ಏಕವಚನದಲ್ಲೇ ಸಂಬೋಧನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಈರಣ್ಣ ಹುಬ್ಬಳ್ಳಿವಿರುದ್ದ ಕುಕನೂರು ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೂರು ದಾಖಲಿಸಿದರು.
ಇಂದು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ರ್ಯಾಲಿ ಹೊರಟು ಕುಕನೂರು ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಈರಣ್ಣ ಹುಬ್ಬಳ್ಳಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ದೂರು ದಾಖಲಿಸಿದರು. ಪ್ರತಿಭಟನಾ ಸಭೆಯಲ್ಲಿಮಾತನಾಡುತ್ತಾ “ಹಾಲಿ ಶಾಸಕರನ್ನು ಯಾರು ಬಡಿತಾರೋ ಅವರೇ ಮುಂದಿನ ಶಾಸಕರಾಗುತ್ತಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಹಲ್ಲೆ ಮಾಡುವಂತೆ ಸಾರ್ವಜನಿಕರಿಗೆ ಪ್ರಚೋದನೆ ನೀಡಿದ್ದಾರೆ.
‘ಸಾಂವಿಧಾನಿಕ ಹುದ್ದೆಯಲ್ಲಿರುವ ಶಾಸಕರಿಗೆ ಏಕವಚನದಲ್ಲಿ ಅವಚ್ಯಾ ಶಬ್ದಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾದ ಹಾಗೂ ಸಮಾಜದಲ್ಲಿ ಹೊಡಿ-ಬಡಿ ಎಂದು ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡಿ ಸಮಾಜದ ಸ್ವಾಸ್ಥೆಯನ್ನು ಹಾಳು ಮಾಡುವ ಮೂಲಕ ಶಾಂತಿ ಭಂಗವನ್ನು ಉಂಟು ಮಾಡಿದ್ದಾರೆ. ಕಾನೂನು ರೀತಿ ವಿಚಾರಣೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.