LOCAL NEWS : 26 ವರ್ಷ ಭಾರತೀಯ ಸೇನೆಯಲ್ಲಿ ಸೇವೆ : ಮರಳಿ ತನ್ನ ತಾಯ್ನಾಡಿಗೆ ಬಂದ ಯೋಧ ಮೖಲಾರಪ್ಪ ಬ್ಯಾಟಣ್ಣವರ್
CRPF ದಲ್ಲಿ 26 ವರ್ಷ ದೇಶ ಸೇವೆ ಗೖದು ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ ಯೋಧ ಮೖಲಾರಪ್ಪ ಬ್ಯಾಟಣ್ಣವರ್
ಲಕ್ಷ್ಮೇಶ್ವರ : ನಗರಕ್ಕೆ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ನಂತರ ಯೋಧರಿಗೆ ಸ್ವಗೃಹದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮೀಕೋಳ್ಳಲಾಯಿತು.
ಈ ಕಾರ್ಯಕ್ರಮ ವನ್ನು ಡಿ ದೆವರಾಜ ಗದಗ ವಿಭಾಗೀಯ ನಿಯಂತ್ರಣಾಧಿಕಾರಿಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಂಜಿನಪ್ಪ ಎ ಇ ಇ ಹೆಸ್ಕಾಂ ಲಕ್ಷ್ಮೇಶ್ವರ, ಶ್ರೀಮತಿ ಸವಿತಾ ಆದಿ ವ್ಯವಸ್ಥಾಪಕರು ಕೆ ಎಸ್ ಆರ್ ಟಿ ಸಿ ಡಿಪೋ ಲಕ್ಷ್ಮಿಶ್ವರ, ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಹಾಜರಿದ್ದರು. ನಾಗರಾಜ್ ಮಡಿವಾಳರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು, ಪಕ್ಕೀರೇಶ, ಮ್ಯಾಟಣ್ಣನವರ , ಹನುಮಂತ ಮ್ಯಾಟಣ್ಣನವರ, ಮಾರುತಿ ಹರಿಜನ, ತಿಪ್ಪಣ್ಣ ಸಂಶಿ, ಬಸವರಾಜ್ ಸೂರಣಗಿ, ರವಿ ಕರೆಣ್ಣನವರ, ಸಂಜೀವಣ್ಣನವರ ನಿವೃತ್ತ ಯೋದರ ಸಂಘ, ಹಾಗೂ ಪೖಲವಾನರ ಸಂಘವರು CRPF ದಲ್ಲಿ 26 ವರ್ಷ ದೇಶ ಸೇವೆ ಗೖದ ಯೋದರಾದ ಶ್ರೀ ಮೖಲಾರಪ್ಪ ಮ್ಯಾಟಣ್ಣನವರ ದಂಪತಿಗಳಿಗೆ ಸನ್ಮಾನಿಸಲಾಯಿತು.
ನಿವೃತ್ತ ಯೋದರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಕುಟುಂಬ ವರ್ಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶ್ರೀಕಾಂತ್ ಬಾಲೆಹೋಸುರ ಇವರು ನಿರೂಪಿಸಿ ದರು. ಲಕ್ಷ್ಮೇಶ್ವರ ಹಾಗೂ ಬಾಲೆಹೋಸೂರು ಗ್ರಾಮದ ಅಪಾರ ಬಂಧುಗಳು ಅಭಿಮಾನಿಗಳು ಗುರು ಹಿರಿಯರು ಭಾಗವಹಿಸಿದ್ದರು.