BREAKING NEWS : ಕುರಿಗಳ ಮೈ ತೊಳೆಯಲು ಹೋಗಿ ನೀರುಪಾಲದ ಯುವಕ

You are currently viewing BREAKING NEWS : ಕುರಿಗಳ ಮೈ ತೊಳೆಯಲು ಹೋಗಿ ನೀರುಪಾಲದ ಯುವಕ

 ಕುರಿಗಳ ಮೈ ತೊಳೆಯಲು ಹೋಗಿ ನೀರುಪಾಲದ ಯುವಕ
ಕುಕನೂರು : ತಾಲೂಕಿನ ಗಾವರಾಳ ಗ್ರಾಮದಲ್ಲಿ ಕುರಿಗಳ ಮೈ ತೊಳೆಯಲು ಹೋಗಿ ಯುವಕ ನೀರುಪಾಲದ ಘಟನೆ ಮಂಗಳವಾರ ಬೆಳ್ಳಿಗ್ಗೆ ೧೦ಗಂಟೆ ಸುಮಾರಿಗೆ ನೆಡೆದಿದೆ.
ಮೃತ ಯುವಕ ಮಾರುತಿ ಹನಮಂತಪ್ಪ  (21ವರ್ಷ) ಎಂದು ತಿಳಿದು ಬಂದಿದೆ. ಮೃತ ಯುವಕನು ಕುರಿಗಾಯಿ ಆಗಿದ್ದು ಕುರಿಗಳು ಮೈ ತೊಳೆಯುವಾಗ ಈ ಘಟನೆಯು ನಡೆದಿದೆ.
ಗಾವರಾಳ ಗ್ರಾಮದ ಹೊರವಲಯದಲ್ಲಿರುವ ಗ್ರಾನೈಟ್ ಬಳಕೆಯ ಬಳಿಕ ಹೊಂಡ ಬಿದ್ದ ಜಮೀನಿನಲ್ಲಿ ನೀರು ನಿಂತಿದ್ದು, ಆ ನೀರಿನಲ್ಲಿ ಕುರಿಗಳ ಮೈತೊಳೆಯಲು ಹೋದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.


ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಹಾಗೂ ಪೋಲಿಸ್ ಇಲಾಖೆಯು ಜಂಟಿ ಕಾರ್ಯಾಚರಣೆ ನೆಡೆಸಿ ಮೃತ ದೇಹವನ್ನು ಹೊರತೆಗೆಯಲಾಗಿದೆ. ಈ ಘಟನೆಯ ಕುರಿತು ಕುಕನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

error: Content is protected !!